ಕೆಲ ದಿನಗಳ ಹಿಂದಷ್ಟೇ 17 ವರ್ಷದ ಯುವತಿಯನ್ನ ಮದುವೆಯಾಗಿ ಸುದ್ದಿಯಾಗಿದ್ದ ಇಂಡೋನೇಷ್ಯಾದ 78 ವರ್ಷದ ವೃದ್ಧ ಇದೀಗ ತನ್ನ ವೈವಾಹಿಕ ಜೀವನ ಮುರಿದುಕೊಳ್ಳಲು ನಿರ್ಧರಿಸಿದ್ದಾನೆ. ಕಳೆದ ತಿಂಗಳಷ್ಟೇ ವಿವಾಹವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡಿದ್ದ ಈ ಜೋಡಿ ಕಳೆದ ವಾರ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿವೆ .
ವೃದ್ಧ ಅಬಾ ಸರ್ನಾ ವಿಚ್ಚೇದನದ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ನೋನಿ ನವಿತಾ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಇವರಿಬ್ಬರ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬರದೇ ಇದ್ದರೂ ವಿಚ್ಚೇದನಕ್ಕೆ ಮುಂದಾಗಿರೋದು ನೋನಿ ಕುಟುಂಬಸ್ಥರನ್ನ ಆತಂಕಕ್ಕೆ ದೂಡಿತ್ತು.
ಇನ್ನು ಈ ವಿಚಾರವಾಗಿ ಮಾತನಾಡಿರುವ ನೋನಿ ಸಹೋದರಿ ಇಯಾನ್, ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ – ಕಲಹಗಳು ಇದ್ದಿರಲಿಲ್ಲ. ದಿಢೀರ್ ಈ ವಿಚ್ಚೇದನದ ನಿರ್ಧಾರ ಕೈಗೊಂಡಿರೋದನ್ನ ಕೇಳಿ ನಾನು ಶಾಕ್ಗೆ ಒಳಗಾದೆ ಅಂತಾ ಹೇಳಿದ್ದಾರೆ. ಮದುವೆಗೂ ಮುನ್ನವೇ ನೋನಿ ಗರ್ಭಿಣಿಯಾಗಿದ್ದರು ಎಂಬ ವಿಚಾರ ಕೇಳಿ ಅಬಾ ಡಿವೋರ್ಸ್ ನೀಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡ್ತಿವೆ.