alex Certify ಸಾರ್ವಜನಿಕರ ಜೀವನ ವಿಧಾನವನ್ನೇ ಬದಲಾಯಿಸಿದ ಕೊರೊನಾ…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರ ಜೀವನ ವಿಧಾನವನ್ನೇ ಬದಲಾಯಿಸಿದ ಕೊರೊನಾ…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಕೋವಿಡ್-19 ಸಾಂಕ್ರಮಿಕ ತಂದಿಟ್ಟಿರುವ ಸಂಕಷ್ಟದ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಕುರಿತಂತೆ ಜನರಲ್ಲಿ ಜಾಗೃತಿ ತುಸು ಹೆಚ್ಚೇ ಆಗಿದೆ.

ಲೈಫ್‌ಸ್ಟೈಲ್‌ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಈ ವೈರಸ್‌ ಕಾಟ ಕೊಡುವ ಸಾಧ್ಯತೆಗಳು ಜಾಸ್ತಿ ಇವೆ ಎಂಬ ವರದಿಗಳು ಜನರಲ್ಲಿ ಫಿಟ್ನೆಸ್ ಕಡೆಗೆ ಇನ್ನಷ್ಟು ಗಮನ ಕೊಡುವಂತೆ ಮಾಡಿದೆ.

ಈ ಬಗ್ಗೆ ಹೆಲ್ತ್‌ & ಫಿಟ್ನೆಸ್‌ ಕ್ಷೇತ್ರದಲ್ಲಿರುವ ವಿಎಲ್‌ಸಿಸಿ ಸಮೀಕ್ಷೆಯೊಂದನ್ನು ನಡೆಸಿದೆ.

ಕಳೆದ 12 ತಿಂಗಳ ಅವಧಿಯಲ್ಲಿ ತಂತಮ್ಮ ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಸಮೀಕ್ಷೆಯಲ್ಲಿ ಭಾಗಿಯಾದ 78% ಮಂದಿ ಹೇಳಿದ್ದಾರೆ.

ತಮ್ಮ ಆಹಾರ ಪಥ್ಯದಲ್ಲಿ ಬದಲಾವಣೆ ತಂದಿರುವುದಾಗಿ 35% ಜನರು ತಿಳಿಸಿದರೆ, ಫಿಟ್ನೆಸ್ ಹಾಗೂ ಯೋಗ ಮೂಲಕ ತಂತಮ್ಮ ರೋಗ ನಿರೋಧಕ ಶಕ್ತಿ ವರ್ಧಿಸಿಕೊಂಡಲ್ಲಿ ಸರಿಯಾಗುತ್ತದೆ ಎಂದು 34% ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

ನವೆಂಬರ್‌ 26ರಂದು ವಿಶ್ವ ಬೊಜ್ಜು ವಿರೋಧಿ ದಿನದಂದು ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಸಾಂಕ್ರಮಿಕ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಲೈಫ್‌ಸ್ಟೈಲ್ ನಲ್ಲಿ ಮಾರ್ಪಾಡು ಮಾಡಿಕೊಳ್ಳುವ ವಿಚಾರವನ್ನು ಜನರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ತಿಳಿಯಲು ಈ ಸಮೀಕ್ಷೆ ನಡೆಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...