ಟ್ಯಾಟು ಕ್ರೇಜ್ ಸದಾಕಾಲಕ್ಕೂ ಇದ್ದೇ ಇದೆ. ಹೊಸ ಆವಿಷ್ಕಾರಗಳು, ಹೊಸ ಪ್ರಯೋಗಗಳು ಆಗುತ್ತಿದೆ. ಯುವಜನರು ಟ್ಯಾಟುಗೆ ಮಹತ್ವ ಕೊಟ್ಟು ತಮ್ಮಿಷ್ಟದ ಹೆಸರು, ಚಿನ್ಹೆ, ಸಂಕೇತ ಹಾಕಿಸಿಕೊಳ್ಳುವುದು ವಾಡಿಕೆ.
ತನ್ನನ್ನು ಮ್ಯಾಗ್ನಟೋ ಎಂದು ಕರೆದುಕೊಳ್ಳುವ 72 ವರ್ಷದ ಜರ್ಮನಿಯ ವ್ಯಕ್ತಿ ಹೆಚ್ಚು ಹಚ್ಚೆ ಹಾಕಿದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ವುಲ್ಫ್ ಗ್ಯಾಂಗ್ ಕಿರ್ಷ್ ಅವರ ದೇಹದ ಮೇಲೆ ಹತ್ತು ಅಥವಾ ಇಪ್ಪತ್ತು ಹಚ್ಚೆ ಗುರುತಿಲ್ಲ, ದಾಖಲೆ ಎಂಬಂತೆ ದೇಹದ ಸುಮಾರು ಶೇ.98ರಷ್ಟು ಕಡೆ ಹಚ್ಚೆ ಹಾಕಲಾಗಿದೆ.
ಮೆಚ್ಚುಗೆಗೆ ಪಾತ್ರವಾಗಿದೆ ಪುಟ್ಟ ಮಗುವಿಗೆ ಆಟಿಕೆ ತಲುಪಿಸಲು ಏರ್ಲೈನ್ಸ್ ಮಾಡಿದ ಪ್ರಯತ್ನ
86 ಟ್ಯಾಟೂಗಳಲ್ಲದೆ, 17 ಇಂಪ್ಲಾಂಟ್‌ಗಳನ್ನು ಸಹ ಹೊಂದಿದೆ. ತನ್ನ ತೋಳು, ಮುಖ, ಕುತ್ತಿಗೆ, ಕಾಲು, ಕಣ್ಣು ಮತ್ತು ತುಟಿಗಳ ಮೇಲೆ ಸಹ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪಾದದ ಅಡಿಭಾಗವನ್ನು ಹೊರತುಪಡಿಸಿ. ಅವರು ಮ್ಯಾಗ್ನೆಟೋ ಎಂಬ ಅಡ್ಡಹೆಸರನ್ನೂ ಸಹ ಹಾಕಿಸಿಕೊಂಡಿದ್ದು, ಹಚ್ಚೆ ಪ್ರಯಾಣ ಕ್ರಾಂತಿಕಾರಿಯಾದದ್ದು ಎಂದು ಹೇಳಿಕೊಂಡಿದ್ದಾರೆ.