alex Certify 71 ವರ್ಷದ ವೃದ್ಧೆ ಪ್ರೀತಿಯಲ್ಲಿ ಬಿದ್ದ 18 ವರ್ಷದ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

71 ವರ್ಷದ ವೃದ್ಧೆ ಪ್ರೀತಿಯಲ್ಲಿ ಬಿದ್ದ 18 ವರ್ಷದ ಯುವಕ….!

ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿ ಜಾತಿ, ವಯಸ್ಸಿನ ಗಡಿ ಮೀರಿದ್ದು. ಇದಕ್ಕೆ ಈ ದಂಪತಿ ಉತ್ತಮ ನಿದರ್ಶನ. ತನಗಿಂತ 53 ವರ್ಷ ದೊಡ್ಡವಳನ್ನು ಯುವಕ ಪ್ರೀತಿಸಿದ್ದಾನೆ. ಆರು ವರ್ಷಗಳ ಹಿಂದೆ ಭೇಟಿಯಾಗಿದ್ದ ಈ ಜೋಡಿ ಮಧ್ಯೆ ನಿಜವಾದ ಪ್ರೀತಿಯಿದೆ.

2015ರಲ್ಲಿ 18 ವರ್ಷದ ಯುವಕನಿಗೆ 71 ವರ್ಷದ ವೃದ್ಧೆ ಮೇಲೆ ಪ್ರೀತಿ ಹುಟ್ಟಿತ್ತು. 18 ವರ್ಷದ ಗ್ಯಾರಿ ಹಾರ್ಡ್‌ವಿಕ್ ತನ್ನ ಚಿಕ್ಕಮ್ಮ ಲಿಜಾ ಅಂತ್ಯಕ್ರಿಯೆಗೆ ಹೋಗಿದ್ದ. ಈ ವೇಳೆ ಭಾವಿ ಪತ್ನಿ ಅಲ್ಮೆಡಾ ಸಿಕ್ಕಿದ್ದಾಳೆ. ಆ ಸಮಯದಲ್ಲಿ ಅಲ್ಮೆಡಾಗೆ 71 ವರ್ಷವಾಗಿತ್ತು. ಮಗನನ್ನು ಅಲ್ಮೆಡಾ ಕಳೆದುಕೊಂಡಿದ್ದಳು. ಒಂದೇ ನೋಟದಲ್ಲಿ ಪ್ರೀತಿಗೆ ಬಿದ್ದಿದ್ದ ಜೋಡಿ ಹುಚ್ಚರಂತೆ ಪ್ರೀತಿಸಲು ಶುರು ಮಾಡಿದ್ದರು.

ಎರಡು ವಾರಗಳ ನಂತ್ರ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಮದುವೆ ನಂತ್ರ ಅಲ್ಮೆಡಾ ತನ್ನ ಮೊಮ್ಮಗನ ಮನೆಯಲ್ಲಿ ಗಂಡನ ಜೊತೆ ವಾಸವಾಗಿದ್ದಾಳೆ. ಆಕೆ ಮೊಮ್ಮಗ ಕೂಡ ಪತಿಗಿಂತ ಮೂರು ವರ್ಷ ದೊಡ್ಡವನು. ಮದುವೆಯಾಗಿ ಆರು ವರ್ಷ ಕಳೆದಿದೆ. ಇಬ್ಬರ ಮಧ್ಯೆ ಅದೇ ಪ್ರೀತಿ ಉಳಿದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯನ್ನು ಜನರು ಇಷ್ಟಪಡ್ತಾರೆ. ಇತ್ತೀಚಿಗೆ ಜೋಡಿ ಹಂಚಿಕೊಂಡ ಫೋಟೋಕ್ಕೆ ಲಕ್ಷಾಂತರ ಲೈಕ್ ಸಿಕ್ಕಿದೆ. ವಯಸ್ಸಿನ ಅಂತರ ಅವರ ಮನಸ್ಸನ್ನು ಅವಲಂಭಿಸಿರುತ್ತದೆ ಎಂದು ಅವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...