ಯುರೋಪ್ ರಾಷ್ಟ್ರಗಳಲ್ಲಿ ಎರಡನೇ ಹಂತದ ಕರೊನಾ ಅಲೆ ಶುರುವಾಗಿರೋದ್ರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಗುರುವಾರ ರಾತ್ರಿಯಿಂದ ಡಿಸೆಂಬರ್ 1ರವರೆಗೆ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಿದ್ದಾರೆ.
ಲಾಕ್ಡೌನ್ ಆದೇಶ ಇನ್ನೇನು ಶುರುವಾಗಲಿದೆ ಎಂಬ ಕೆಲವೇ ಗಂಟೆಗಳ ಮೊದಲು ಪ್ಯಾರಿಸ್ನಲ್ಲಿ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಲಾಕ್ಡೌನ್ ಆದೇಶದಿಂದಾಗಿ ಸ್ವಂತ ಊರಿಗೆ ಹೊರಟ ಜನರಿಂದಾಗಿ ಬರೋಬ್ಬರಿ 700 ಕಿಲೋಮೀಟರ್ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಎರಡನೇ ಹಂತದ ಕರೊನಾ ವೈರಸ್ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರಿಗೆ ಮನೆಯಲ್ಲೇ ಇರಲು ಆದೇಶ ನೀಡಿದ ಹಿನ್ನೆಲೆ ಜನರು ಸ್ವಂತ ಊರಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಫ್ರಾನ್ಸ್ನಲ್ಲಿ ಕರೊನಾ ಸಾವುಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಗುರುವಾರ 47,637 ಹೊಸ ಸೋಂಕು ದಾಖಲಾಗೋದ್ರ ಜೊತೆಗೆ 250 ಮಂದಿಯ ಮರಣವಾಗಿದೆ.