alex Certify ಆಪರೇಷನ್​ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಯಾದ ವೃದ್ದ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪರೇಷನ್​ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಯಾದ ವೃದ್ದ..!

ಹೃದಯಾಘಾತಕ್ಕೆ ಒಳಗಾಗಿದ್ದ ಲಂಡನ್​ ಮೂಲದ ವೃದ್ಧ ಶಸ್ತ್ರ ಚಿಕಿತ್ಸೆ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಗಳಾಗಿ ಬದಲಾಗಿದ್ದಾರೆ.

ಪೀಟರ್​ ಸ್ಮಿತ್​ ಎಂಬವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ್ದರಿಂದ ಅವರನ್ನ ಕಿಂಗ್ಸ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಸರ್ಜರಿ ಬಳಿಕ ಜೀವ ಉಳಿಸಿಕೊಂಡ ಪೀಟರ್​ ಜೀವನ ಸಂಪೂರ್ಣವಾಗಿ ಬದಲಾಗಿ ಹೋಗಿದೆ.

ಬೆಟ್ಟಿಂಗ್ ನಲ್ಲಿ ಭಾಗವಹಿಸಿದ್ದ ಪೀಟರ್​ ಪತ್ನಿ ಕೇವಲ 50 ರೂಪಾಯಿ ಖರ್ಚು ಮಾಡಿ 24 ಲಕ್ಷ ರೂಪಾಯಿಗಳನ್ನ ರಾತ್ರಿ ಬೆಳಗಾಗುವಷ್ಟರಲ್ಲಿ ಸಂಪಾದಿಸಿದ್ದಾರೆ. 50 ರೂಪಾಯಿಯಿಂದ ಬೆಟ್ಟಿಂಗ್​ ಆರಂಭಿಸಿದ ಪತ್ನಿ ವಿನ್ನಿ ಆಯ್ಕೆ ಮಾಡಿದ ನಂಬರ್​ಗಳೆಲ್ಲವೂ ಆಕೆಗೆ ಭಾಗ್ಯದ ಬಾಗಿಲನ್ನ ತೆರೆಸಿವೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಪೀಟರ್​ ಪತ್ನಿ ವಿನ್ನಿ, ನನಗೆ ಕೊರೊನಾ ನಿಯಮಾವಳಿಗಳಿಂದಾಗಿ ಆಸ್ಪತ್ರೆಯೊಳಗೆ ಹೋಗಲು ಅವಕಾಶ ಸಿಗಲಿಲ್ಲ. ಆದರೆ ನಾನ್ಯಾವಾಗ ಇಷ್ಟು ದೊಡ್ಡ ಮೊತ್ತದ ಹಣ ಸಂಪಾದಿಸಿದ್ದೇನೆ ಎಂದು ತಿಳಿಯಿತೋ ಕೂಡಲೇ ಪೀಟರ್​ಗೆ ಮಾಹಿತಿ ನೀಡಿದೆ ಅಂತಾ ಹೇಳಿದ್ರು. ಪೀಟರ್​ ಕೂಡ ಈ ವಿಚಾರವಾಗಿ ಮಾತನಾಡಿ 5 ಗಂಟೆ ಅವಧಿಯಲ್ಲಿ ನಾವು ಲಕ್ಷಾಧಿಪತಿಗಳಾಗಿದ್ದೇವೆ ಅಂತಾ ಸಂತಸ ವ್ಯಕ್ತಪಡಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...