
ಕೋವಿಡ್-19 ವಯೋವೃದ್ದರಿಗೆ ಬಲೇ ಅಪಾಯಕಾರಿ ಎಂಬ ವಿಚಾರದ ನಡುವೆಯೂ ಅನೇಕ ವೃದ್ಧರು ಈ ಸೋಂಕಿನ ವಿರುದ್ಧ ಗೆದ್ದುಬಂದು ಸ್ಪೂರ್ತಿಯಗಾಥೆಯಾಗಿರುವ ಸಾಕಷ್ಟು ನಿದರ್ಶನಗಳು ನಮ್ಮ ನಡುವೆ ಇವೆ.
ಇದೇ ವೇಳೆ, ಅಮೆರಿಕದ ಸಿಯಾಟಲ್‌ನಲ್ಲಿ 70 ವರ್ಷದ ವೃದ್ಧರೊಬ್ಬರು ಕೊರೋನಾ ವೈರಸ್ ವಿರುದ್ಧ ಗೆಲುವು ಸಾಧಿಸಿದ ಬೆನ್ನಿಗೇ ಆಸ್ಪತ್ರೆಯ ಬಿಲ್ ಕಂಡು ದಂಗಾಗಿಬಿಟ್ಟಿದ್ದಾರೆ.
ಮೈಕೆಲ್ ಫ್ಲೋರ್ ಹೆಸರಿನ ಇವರು, 62 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಕೋವಿಡ್-19 ವಿರುದ್ಧ ಹೋರಾಟ ನಡೆಸಿದ್ದಾರೆ. ಡಿಸ್ಚಾರ್ಜ್ ಆಗುವ ವೇಳೆಗೆ ಅವರಿಗೆ ಬಿಲ್ ರೂಪದಲ್ಲಿ 1.2 ದಶಲಕ್ಷ ಡಾಲರ್ (8.14 ಕೋಟಿ ರೂ.ಗಳು) ಪಾವತಿ ಮಾಡಬೇಕಾಗಿ ಬಂದಿದೆ. 181 ಪುಟಗಳ ಈ ಸವಿವರವಾದ ಬಿಲ್‌ನಲ್ಲಿ ವೆಂಟಿಲೇಟರ್‌ನಿಂದ ಹಿಡಿದು ಔಷಧೋಪಚಾರದ ಸಕಲವನ್ನೂ ನಮೂದಿಸಲಾಗಿದೆ.