ತನ್ನನ್ನು ತಿರಸ್ಕರಿಸಿದ ಗರ್ಲ್ ಫ್ರೆಂಡ್ ಗೆಂದು ಏಳು ವರ್ಷದ ಬಾಲಕ ಹೂವಿನ ಬೊಕೆ ತಂದುಕೊಟ್ಟ ಕ್ಯೂಟ್ ಸ್ಟೋರಿ ಇದು.
ಹಾರ್ಲೆ ಗ್ಲೆನ್‌ರೈಟ್ ಹೆಸರಿನ ಈ ಪುಟಾಣಿ ಬಾಲಕನ ಆಟಿಟ್ಯೂಡ್ ಅನ್ನು ಇಷ್ಟಪಡದ ಸೋಫಿ ಕ್ಲಾನ್ಸೀ ಆತನನ್ನು ಮೊದಲಿಗೆ ಡಂಪ್ ಮಾಡಿದ್ದಳು. ಆಟಿಸಮ್ ನಿಂದ ಬಳಲುತ್ತಿರುವ ಪುಟ್ಟ ಬಾಲಕ ಮೊದಲಿಗೆ ತನ್ನ ಶಿಕ್ಷಕಿಯ ಮೇಲೆ ಕೋಪ ಮಾಡಿಕೊಂಡಿದ್ದ. ಆತನ ಈ ವರ್ತನೆಯು ಸೋಫಿಗೆ ಇಷ್ಟವಾಗದೆ ಆತನೊಂದಿಗೆ ಮಾತು ಬಿಟ್ಟಿದ್ದಳು.
ಮಾರನೇ ದಿನವೇ ಒಂದು ಸುಂದರ ಬೊಕೆಯೊಂದನ್ನು ಹಿಡಿದು ಶಾಲೆಗೆ ಹೊರಟ ಹಾರ್ಲೆ, ಶಾಲೆಗೆ ತಡವಾಗಿ ಬಂದ ಸೋಫಿಯನ್ನು ಕಾಯುತ್ತಾ ಕುಳಿತು, ಆಕೆಗೆ ಬೊಕೆ ನೀಡಿದ್ದಾನೆ. ಇದೇ ಖುಷಿಯಲ್ಲಿ ಹಾರ್ಲೆಗೆ ಹಗ್ ಕೊಟ್ಟ ಸೋಫಿ, ಆತನನ್ನು ಮತ್ತೆ ಅಕ್ಸೆಪ್ಟ್ ಮಾಡಿಕೊಂಡಿದ್ದಾಳೆ.