ಮಾರಣಾಂತಿಕ ವೈರಸ್ ಗಳ ತವರೂರು ಎಂದೇ ಕುಖ್ಯಾತಿ ಪಡೆದಿರುವ ಚೀನಾ ಈಗಾಗಲೇ ಕೊರೊನಾ ಕಾರಣಕ್ಕೆ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ.
ಇದೀಗ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಚೀನಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕೀಟಗಳ ಕಡಿತದಿಂದ ಈ ವೈರಸ್ ಮಾನವರಿಗೆ ಹಬ್ಬುತ್ತಿದ್ದು, ಇದಕ್ಕೆ ಚೀನಾದಲ್ಲಿ ಈಗಾಗಲೇ ಏಳು ಮಂದಿ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.
60 ಕ್ಕೂ ಅಧಿಕ ಮಂದಿ ಚೀನಾದಲ್ಲಿ ಸೋಂಕು ಪೀಡಿತರಾಗಿದ್ದಾರೆ ಎನ್ನಲಾಗಿದ್ದು, ಜ್ವರ ಹಾಗೂ ಕೆಮ್ಮು ಇದರ ಲಕ್ಷಣಗಳಂತೆ. ಕೊರೊನಾದಂತೆ ಈ ಹೊಸ ವೈರಸ್ ಚೀನಾದಿಂದ ವಿಶ್ವದ ಇತರೆ ಭಾಗಗಳಿಗೆ ಹರಡದಿದ್ದರೆ ಸಾಕು ಎಂಬ ಮಾತುಗಳು ಕೇಳಿಬರುತ್ತಿವೆ. ಚೀನಾ ಕೂಡ ಈ ಹೊಸ ವೈರಸ್ ನಿಯಂತ್ರಣಕ್ಕೆ ಸಕಲ ಪ್ರಯತ್ನ ಮಾಡುತ್ತಿದೆ.