
ಇಂಗ್ಲೆಂಡ್‌ನಲ್ಲಿರುವ 68 ವರ್ಷದ ತಾಯಿಯೊಬ್ಬಳು, ತನ್ನ 21 ವರ್ಷದ ಮಗಳ ಮುಖವನ್ನು ನಿತ್ಯ ಏಳಿಸುವಾಗ ನೆಕ್ಕುವ ವಿಚಿತ್ರ ವಿಷಯ ಇದೀಗ ಬಹಿರಂಗವಾಗಿದೆ.
ಹೌದು, ಅಚ್ಚರಿಯಾದರೂ ಇದು ಸತ್ಯ. ಯುಕೆದ ಮೆರ್ಸಿಯಾ ಎನ್ನುವ ಮಹಿಳೆ ತನ್ನ ಮಗಳು ಅಲೇನಾ ಮುಖವನ್ನು ಪ್ರತಿನಿತ್ಯ ನಾಯಿಯ ರೀತಿ ನೆಕ್ಕುವ ಮೂಲಕ ಎಬ್ಬಿಸುತ್ತಾಳಂತೆ.
ಅನೇಕರಿಗೆ ಇದು ಅಸಹ್ಯವಾಗಬಹುದು. ಆದರೆ ಇದನ್ನು ನಾವಿಬ್ಬರೂ ಕಳೆದ ಎರಡು ದಶಕದಿಂದ ಮಾಡಿಕೊಂಡು ಬರುತ್ತಿದ್ದೇವೆ. ಮರ್ಸಿಯಾ ಅಲೇನಾಳನ್ನು ಎಬ್ಬಿಸುವ ಮೊದಲು ಹಾಡುತ್ತಾಳೆ. ಬಳಿಕ ಮುಖವನ್ನು ನೆಕ್ಕುತ್ತಾಳೆ. ಅಲೇನಾ ಚಿಕ್ಕವಳಿದ್ದಾಗ, ನಾಯಿ ಬೇಕು ಎಂದಾಗ ಕೊಡಿಸಲು ಸಾಧ್ಯವಾಗದಿದ್ದಾಗ, ಸ್ವತಃ ತಾಯಿಯೇ ಶ್ವಾನದ ರೀತಿ ನೆಕ್ಕಲು ಶುರು ಮಾಡಿದ್ದಾರೆ. ಅಷ್ಟಕ್ಕೂ ಮರ್ಸಿಯಾ ಹೆತ್ತತಾಯಿ ಅಲ್ಲವಂತೆ. ಅಲೇನಾ ಹಸುಗೂಸು ಆಗಿದ್ದಾಗಲೇ ದತ್ತು ಪಡೆದಿದ್ದರಂತೆ.