ಭಾರೀ ಹಸಿದಿದ್ದ ಮೊಸಳೆಯೊಂದು ಪಾರ್ಕಿಂಗ್ ಲಾಟ್‌ಗೆ ಭೇಟಿ ಕೊಡುತ್ತಿದ್ದ ಮಂದಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಫ್ಲಾರಿಡಾದ ವೆಂಡೀಸ್ ರೆಸ್ಟಾರಂಟ್‌ನಲ್ಲಿ ಜರುಗಿದೆ. ತಕ್ಷಣ ಪ್ರತಿಕ್ರಿಯಿಸಿ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಆರು ಅಡಿ ಉದ್ದದ ಮೊಸಳೆಯನ್ನು ಇಲಲಿನ ಲೇಯ್ ಆಕರ್ಸ್ ಪ್ರದೇಶದಲ್ಲಿ ಕಂಡಿದ್ದಾರೆ.
“ಚೀಸ್‌ಬರ್ಗರ್ ತಿನ್ನಲು ಆತನಿಗೆ ಬಹಳ ಹಸಿವಾಗಿತ್ತೇನೋ, ಆದರು ಬಹಳ ಭೀತಿ ಮೂಡಿಸಿದ್ದ!” ಎಂದು ಲೀ ಕೌಂಟಿ ಶೆರೀಫ್ ಟ್ವಿಟರ್‌ನಲ್ಲಿ ಬರೆದಿದ್ದು, ಮೊಸಳೆಯನ್ನು ರಕ್ಷಿಸುವ ಕಾರ್ಯಾಚರಣೆಯ ಚಿತ್ರಗಳನ್ನು ಶೇರ್ ಮಾಡಿಕೊಂಡಿದೆ.
ಡೈವರ್ ಕ್ಯಾಮರಾದಲ್ಲಿ ಸೆರೆಯಾಯ್ತು ದೈತ್ಯ ಶಾರ್ಕ್
ಫ್ಲಾರಿಡಾ ವನ್ಯಜೀವ ಸಂರಕ್ಷಣಾ ಇಲಾಖೆ ಸಿಬ್ಬಂದಿ ಪೊಲೀಸರಿಗೆ ಸಾಥ್ ಕೊಟ್ಟಿದ್ದು, ಮೊಸಳೆಯನ್ನು ಸುರಕ್ಷಿತವಾಗಿ ಅಲ್ಲಿಂದ ತೆರವುಗೊಳಿಸಿ ಬೇರೊಂದು ಜಾಗಕ್ಕೆ ಬಿಟ್ಟಿದ್ದಾರೆ.
https://twitter.com/jonsimonson/status/1394689752280928259?ref_src=twsrc%5Etfw%7Ctwcamp%5Etweetembed%7Ctwterm%5E1394689752280928259%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fflorida-alligator-chase-pedestrian-in-parking-lot-7322976%2F