ಮೆಲ್ಬೋರ್ನ್: ಹೂಳಿನಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಮೂರು ವಾರಗಳ ಕಾಲ ಆದಿ ಮಾನವನಂತೆ ಕಾಡಿನ ಅಣಬೆ ತಿಂದು ಜೀವಿಸಿದ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ನಲ್ಲಿ ನಡೆದಿದೆ. ರಾಬರ್ಟ್ ವೇಬರ್ ಇಂಥ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ.
ಜ. 6 ರಂದು ತನ್ನ ನಾಯಿಯ ಜತೆ ಕಾರಿನಲ್ಲಿ ಫಾರ್ಮ್ ಹೌಸ್ ಗೆ ತೆರಳುತ್ತಿದ್ದ. ಆಗ ಡ್ಯಾಂ ಒಂದರ ಹೂಳಿನಲ್ಲಿ ಸಿಲುಕಿಕೊಂಡಿದ್ದ. ಮೂರು ದಿನ ತನ್ನ ಕಾರಿನಲ್ಲೇ ಕಾಲ ಕಳೆದಿದ್ದ. ನಂತರ ಹೊರಗಡೆ ಹೋಗಿ ಡ್ಯಾಂನ ನೀರು ಕುಡಿದು ಗಿಡ ಗಂಟಿಗಳಿರುವ ಪ್ರದೇಶಕ್ಕೆ ತೆರಳಿ ಕಾಡಿನ ಅಣಬೆ ತಿಂದು ಆದಿ ಮಾನವನಂತೆ ಮರವೊಂದರ ಪೊಟರೆಯಲ್ಲಿ ಕಾಲ ಕಳೆಯಲಾರಂಭಿಸಿದ.
ಸಹಾಯಕ್ಕಾಗಿ ಪ್ರಯತ್ನ ನಡೆಸಿದ್ದ ಆತನ ಪತ್ನಿ ನೀಡಿದ ಮಾಹಿತಿ ಆಧರಿಸಿ ಕಾರಿನಿಂದ ಸುಮಾರು ಮೂರು ಕಿಮೀ ದೂರದಲ್ಲಿದ್ದ ವೆಬರ್ ನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಒಟ್ಟು 18 ದಿನ ಆತ ಹಾಗೆ ಜೀವಿಸಿದ್ದ. ಆತನ ನಾಯಿ ಇನ್ನೂ ನಾಪತ್ತೆಯಾಗಿದೆ.