ಪ್ರತಿ ವರ್ಷವೂ ಉಲ್ಕೆಗಳು ಹಾಗೂ ಕ್ಷುದ್ರ ಗ್ರಹಗಳಿಂದ 5,000 ಟನ್‌ಗಳಷ್ಟು ಹೆಚ್ಚುವರಿ ಧೂಳು ಭೂಗ್ರಹದ ಮೇಲೆ ಬೀಳುತ್ತಲೇ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಧೂಳಿನ ಕಣಗಳು ನಮ್ಮ ವಾತಾವರಣದ ಮುಖಾಂತರ ಹಾದು ಹೋಗಿ, ಅದರಲ್ಲಿ ಕೆಲವಷ್ಟು ಅತಿ ಸಣ್ಣ ಧೂಳಿನ ಕಣಗಳ ರೂಪದಲ್ಲಿ ನೆಲ ಸೇರುತ್ತವೆ. ಉಲ್ಕಾಶಿಲೆಗಳ ಧೂಳು ನಮ್ಮ ಗ್ರಹದ ಮೇಲೆ ಬಿದ್ದಿದೆ.
ಫ್ರಾನ್ಸ್‌ನ ರಾಷ್ಟ್ರೀಯ ವಿಜ್ಞಾನ ಸಂಶೋಧನಾ ಕೇಂದ್ರ, ಪ್ಯಾರಿಸ್‌ನ ಸಾಕ್ಲೇ ವಿವಿ ಹಾಗೂ ರಾಷ್ಟ್ರೀಯ ಪರಿಸರ ಇತಿಹಾಸ ಸಂಗ್ರಹಾಲಯ ಜಂಟಿಯಾಗಿ 20 ವರ್ಷಗಳ ಕಾಲ ನಡೆಸಿದ ಅಧ್ಯಯನವೊಂದರ ವೇಳೆ ಈ ವಿಷಯ ತಿಳಿದುಬಂದಿದೆ.
ಪರಿಸರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ಪಿಲಿಕುಳ ನಿಸರ್ಗಧಾಮ
ಈ ಅತಿ ಸಣ್ಣ ಉಲ್ಕಾಶಿಲೆಗಳ ಧೂಳಿನ ಕಣಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲೆಂದು ರಾಷ್ಟ್ರೀಯ ವಿಜ್ಞಾನ ಸಂಶೋಧನಾ ಕೇಂದ್ರದ ಸಂಶೋಧಕ ಜೀನ್ ಡುಪಾರ್ಟ್ ಅವರು ಕಳೆದ ಎರಡು ದಶಕಗಳ ಅವಧಿಯಲ್ಲಿ ಅಂಟಾರ್ಕ್ಟಿಕಾದಲ್ಲಿರುವ ಫ್ರಾಂಕೋ-ಇಟಾಲಿಯಾ ಕಾಂಕಾರ್ಡಿಯಾ ಕೇಂದ್ರಕ್ಕೆ ಆರು ಬಾರಿ ಭೇಟಿ ಕೊಟ್ಟಿದ್ದಾರೆ.
ನಮ್ಮ ಗ್ರಹದ ಮೇಲೆ ಬರುವ ಅನ್ಯ ಜಗತ್ತಿನ ವಸ್ತುಗಳ ಅಧ್ಯಯನಕ್ಕೆ ಈ ಫಲಿತಾಂಶಗಳು ಸಹಕಾರಿಯಾಗಲಿದ್ದು, ಭೂಮಿ ಮೇಲೆ ನೀರು ಹಾಗೂ ಕಾರ್ಬೋನೇಸಿಯಸ್ ಪದಾರ್ಥಗಳ ಪೂರೈಕೆಗೆ ಇವುಗಳ ಪಾತ್ರ ಏನೆಂದು ಅರಿಯಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.