ಐದು ವರ್ಷದ ಭಾರತೀಯ-ಅಮೆರಿಕನ್ ಪೋರಿಯೊಬ್ಬಳು 105 ನಿಮಿಷಗಳ ಅವಧಿಯಲ್ಲಿ 36 ಪುಸ್ತಕಗಳನ್ನು ಓದುವ ಮೂಲಕ ಎರಡು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಚೆನ್ನೈ ಮೂಲದ ದಂಪತಿಯ ಮಗಳಾದ ಕಿಯಾರಾ ಕೌರ್ ಸದ್ಯ ಯುಎಇನಲ್ಲಿ ಇದ್ದು ಲಂಡನ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ಗಳಲ್ಲಿ ಸ್ಥಾನ ಗಿಟ್ಟಿಸಿದ್ದಾಳೆ.
“ನಿರಂತರವಾಗಿ ಅತ್ಯಂತ ಹೆಚ್ಚು ಸಂಖ್ಯೆಯ ಪುಸ್ತಕಗಳನ್ನು ಓದಿದ ದಾಖಲೆಯನ್ನು ನಿರ್ಮಿಸಿದ್ದಾಳೆ” ಎಂದು ಕಿಯಾರಾ ಕುರಿತಂತೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಬರೆದಿದ್ದು, ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಈಕೆಯ ಬಗ್ಗೆ, “5 ವರ್ಷ ವಯಸ್ಸಿನಲ್ಲೇ 105 ನಿಮಿಷಗಳ ಅವಧಿಯಲ್ಲಿ 36 ಪುಸ್ತಕಗಳನ್ನು ಓದುವ ವಿಶೇಷ ಕ್ಷಮತೆಯನ್ನು ಈಕೆ ಹೊಂದಿದ್ದಾಳೆ” ಎಂದು ಬರೆದಿದೆ.
ಅಬುಧಾಬಿಯ ಶಾಲೆಯೊಂದರಲ್ಲಿ ಓದುತ್ತಿರುವ ಕಿಯಾರಾಗೆ ಓದುವ ಹವ್ಯಾಸ ವಿಪರೀತ ಇರುವುದನ್ನು ಆಕೆಯ ಶಿಕ್ಷಕರೊಬ್ಬರು ಗುರುತಿಸಿದ್ದಾರೆ. ಕಿಯಾರಾ ಕಳೆದ ಒಂದು ವರ್ಷದಿಂದ 200 ಪುಸ್ತಕಗಳನ್ನು ಓದಿದ್ದಾಳೆ ಎಂದು ಆಕೆಯ ಹೆತ್ತವರು ತಿಳಿಸಿದ್ದಾರೆ.