ಮಕ್ಕಳ ಮನಸ್ಸು ತುಂಬಾ ಮೃದು. ಅವುಗಳೊಂದಿಗೆ ವ್ಯವಹರಿಸುವಾಗ ಭಾರೀ ಎಚ್ಚರಿಕೆ ವಹಿಸಬೇಕು.
ಎಲ್ಲೋ ಏನೋ ನೋಡಿದ್ದು, ಕೇಳಿದ್ದನ್ನೇ ಇಟ್ಟುಕೊಂಡು ಪ್ರಶ್ನಿಸಿದಾಗ ಸೂಕ್ಷ್ಮವಾಗಿ ಅರ್ಥೈಸಬೇಕು. ಇಲ್ಲದಿದ್ದರೆ, ಮನಸಿನ ಮೇಲೆ ಬಹಳ ಪರಿಣಾಮ ಬೀರುತ್ತದೆ.
ಅಂತಹುದೇ ವಿಡಿಯೋವೊಂದು ವೈರಲ್ ಆಗಿದ್ದು, ಅನೇಕರು ಮಗುವಿನ ಪ್ರತಿಕ್ರಿಯೆಯನ್ನ ಕೊಂಡಾಡಿದರೆ, ಹಲವರು ಮುದ್ದಾಡಿದ್ದಾರೆ, ಕೆಲವರು ಗಂಭೀರ ಅಂಶಗಳನ್ನು ಗಮನಿಸಿದ್ದಾರೆ.
ಕೈಲಿನ್ ಫ್ಲ್ಯಾಡ್ಜರ್ ತನ್ನ 5 ವರ್ಷದ ಮಗು ಜಾಕ್ ಜೊತೆ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಾ ಕುಳಿತಿರುತ್ತಾಳೆ. ಅದರಲ್ಲಿನ ಪಾತ್ರ ತನ್ನ ತಾಯಿಯೊಂದಿಗೆ ಜೀವಿಸುತ್ತಿರುವುದಿಲ್ಲ.
ಇದನ್ನು ಗಮನಿಸಿದ ಜಾಕ್, ತಕ್ಷಣವೇ ಈ ಬಗ್ಗೆ ಪ್ರಶ್ನಿಸುತ್ತಾನೆ. ಮಕ್ಕಳು ದೊಡ್ಡವರಾದ ಮೇಲೆ ತಾಯಿ ಜೊತೆಯಲ್ಲಿರುವುದಿಲ್ಲ ಎಂದು ಕೈಲಿನ್ ಹೇಳಿಬಿಡುತ್ತಾಳೆ. ಅಷ್ಟಕ್ಕೆ ಅಳಲಾರಂಭಿಸುವ ಮಗು, ಹೌದಾ ? ದೊಡ್ಡವರಾದ ಮೇಲೆ ಹೀಗೆಯೆ ? ಜೊತೆಯಲ್ಲಿರುವುದಿಲ್ಲವೇ ? ಎಂದೆಲ್ಲ ವ್ಯಥೆಪಡಲು ಶುರು ಮಾಡುತ್ತದೆ. ತಾಯಿಯೊಂದಿಗೆ ತಾನಿರುವುದಿಲ್ಲ ಎಂಬುದನ್ನು ಕಲ್ಪಿಸಿಕೊಂಡು, ಮನಸ್ಸಿಗೆ ಘಾಸಿ ಮಾಡಿಕೊಂಡು ಅಳಲಾರಂಭಿಸುತ್ತಾನೆ. ಇದನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಕೈಲಿನ್, ಮಕ್ಕಳ ಮನಸ್ಸು ಮತ್ತು ವರ್ತನೆ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
https://www.instagram.com/p/CBhItkMg622/?utm_source=ig_embed