ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ 5 ವರ್ಷದ ಬಾಲಕನೊಬ್ಬ 10 ಕಿ.ಮೀ. ನಡಿಗೆ ಚಾಲೆಂಜ್ ಅನ್ನು ತನ್ನಷ್ಟಕ್ಕೆ ತಾನೇ ಸ್ವೀಕರಿಸಿದ್ದಾನೆ. ಕೆಂಟ್‌ನ ವೆಸ್ಟ್ ಮಾಲಿಂಗ್ ನಲ್ಲಿರುವ ಟೋನಿ ಹಡ್ಗೆಲ್ ಹೆಸರಿನ ಈ ಬಾಲಕ ಜೂನ್‌ನಲ್ಲಿ ಪ್ರತಿನಿತ್ಯ ನಡೆಯುವ ಮೂಲಕ ತನ್ನ ಈ ಗುರಿಯನ್ನು ತಲುಪಲು ನಿರ್ಧರಿಸಿದ್ದಾನೆ.
ಎವೆಲಿನಾ ಲಂಡನ್ ಆಸ್ಪತ್ರೆಗೆಂದು 500 ಪೌಂಡ್‌ನಷ್ಟು ಹಣವನ್ನು ಸಂಗ್ರಹಿಸುವ ಉದ್ದೇಶ ಹೊಂದಿದ್ದ ಈ ಬಾಲಕ ಇದೀಗ 3,90,000 ಪೌಂಡ್ (3.7 ಕೋಟಿ ರೂ.ಗಳು) ಸಂಗ್ರಹಿಸಿದ್ದಾನೆ.
ಕೇವಲ 41 ದಿನಗಳ ಮಗುವಾಗಿದ್ದ ವೇಳೆ, ತನ್ನ ಜೈವಿಕ ಪೋಷಕರಿಂದ ದೈಹಿಕ ಹಿಂಸೆಗೆ ಗುರಿಯಾಗಿದ್ದ ಟೋನಿ ಬಹಳಷ್ಟು ಫ್ರಾಕ್ಚರ್‌ಗಳು ಹಾಗೂ ಉಳುಕುಗಳು ಕಂಡುಬಂದ ಕಾರಣ ಇದೀಗ ಕೃತಕ ಕಾಲುಗಳ ನೆರವಿನಿಂದ ನಡೆಯುತ್ತಿದ್ದಾನೆ. ಇಷ್ಟೆಲ್ಲಾ ಆದರೂ ಸಹ ಬಾಲಕ ಜೀವನ ಸ್ಪೂರ್ತಿಯಲ್ಲಿ ಕಿಂಚಿತ್ತೂ ರಾಜಿಯಾಗಿಲ್ಲ.