ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ವಕೀಲ ಪದವಿಯನ್ನ ಪಡೆದಿದ್ದ 41 ವರ್ಷದ ನಿರುದ್ಯೋಗಿಯೊಬ್ಬ ಪೋಷಕರು ಜೀವನ ನಿರ್ವಹಣೆಗೆ ಹಣ ನೀಡಬೇಕು ಎಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾನೆ. ಫೈಜ್ ಸಿದ್ದಿಕಿ ಎಂಬಾತ ತಾನು ಜೀವನ ನಿರ್ವಹಣೆಗಾಗಿ ನನ್ನ ಶ್ರೀಮಂತ ಪೋಷಕರನ್ನೇ ಆಶ್ರಯಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಸಿದ್ದಿಕಿಯ ದುಬೈ ಮೂಲದ ಪೋಷಕರು ಈತನಿಗೆ 20 ವರ್ಷಗಳ ಕಾಲ ಲಂಡನ್ನ ಹೈಡ್ ಪಾರ್ಕ್ ಬಳಿ ಇರುವ ಫ್ಲ್ಯಾಟ್ನಲ್ಲಿ ಈತನ ಬಳಿ ಬಾಡಿಗೆ ಪಡೆಯದೇ ವಾಸಿಸೋಕೆ ಆಶ್ರಯ ನೀಡಿದ್ರು. ಇದು ಮಾತ್ರವಲ್ಲದೇ ಇಲ್ಲಿಯವರೆಗೆ ಈತನ ಎಲ್ಲಾ ಖರ್ಚುಗಳನ್ನ ನೋಡಿಕೊಂಡಿದ್ದಾರೆ. ಆದರೆ ಇದೀಗ ಕೆಲ ವೈಮನಸ್ಯನದ ಹಿನ್ನೆಲೆ ಈತನಿಗೆ ಹಣ ನೀಡೋದನ್ನ ನಿಲ್ಲಿಸಿದ್ದಾರೆ.
ಆದರೆ ಮಗ ಸಿದ್ದಿಕಿ ಮಾತ್ರ ತನ್ನ ತಂದೆ – ತಾಯಿ ಜೀವನ ನಿರ್ವಹಣೆಗೆ ಹಣ ನೀಡಬೇಕೆಂದು ಆಗ್ರಹಿಸಿ ಬ್ರಿಟನ್ನಲ್ಲಿ ಕಾನೂನು ಹೋರಾಟಕ್ಕೆ ಇಳಿದಿದ್ದಾನೆ. ಆರೋಗ್ಯ ಸಮಸ್ಯೆಯಿಂದಾಗಿ ತಾನು ದುರ್ಬಲನಾಗಿದ್ದು ಹೀಗಾಗಿ ನನಗೆ ಪೋಷಕರು ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು. ನನಗೆ ಹಣಕಾಸಿನ ನೆರವು ನೀಡೋದನ್ನ ನಿಲ್ಲಿಸೋದರ ಮೂಲಕ ಪೋಷಕರು ಮಾನವ ಹಕ್ಕುಗಳ ಉಲ್ಲಂಘನೆ ಮಾಡ್ತಿದ್ದಾರೆ ಅನ್ನೋದು ಸಿದ್ದಿಕಿ ಆರೋಪವಾಗಿದೆ.
ಸಿದ್ದಿಕಿ ಪ್ರತಿಷ್ಠಿತ ಕಾನೂನು ಸಂಸ್ಥೆಗಳಲ್ಲಿ ವಕೀಲ ವೃತ್ತಿಯನ್ನ ಅಭ್ಯಾಸ ಮಾಡಿದ್ದಾರೆ. ಆದರೂ ಕೂಡ 2011ರಿಂದ ಸಿದ್ದಿಕಿ ನಿರುದ್ಯೋಗಿ ಆಗಿದ್ದಾರೆ. ಇವರ ತಾಯಿ ರಕ್ಷಾಂಡಾ (69) ಹಾಗೂ ತಂದೆ ಜಾವೇದ್(71) ಸಿದ್ದಿಕಿಗೆ ವಾರಕ್ಕೆ 40,500 ರೂಪಾಯಿಗಳನ್ನ ಜೀವನ ನಿರ್ವಹಣೆಗೆ ನೀಡುತ್ತಿದ್ದರು.
ಪೋಷಕರ ಬಳಿ ಜೀವನ ನಿರ್ವಹಣೆಗೆ ಹಣ ಕೇಳುವ ಪ್ರಕರಣವನ್ನ ಕಳೆದ ವರ್ಷ ಕುಟುಂಬ ನ್ಯಾಯಾಲಯದ ಜಡ್ಜ್ ತಿರಸ್ಕರಿಸಿದ್ದರು. ಹೀಗಾಗಿ ಇದೀಗ ಸಿದ್ದಿಕಿ ಈ ತೀರ್ಪನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.