alex Certify ನಾಲ್ಕರ ಪೋರನ ಸಾಹಸ ನೋಡಿ ಬೆರಗಾದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕರ ಪೋರನ ಸಾಹಸ ನೋಡಿ ಬೆರಗಾದ ನೆಟ್ಟಿಗರು…!

ಬ್ರೆಜಿಲ್‌ನ ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಸರ್ಫಿಂಗ್ ಕೌಶಲ್ಯದಿಂದ ತನ್ನ ಹೆತ್ತವರು ಹಾಗೂ ಜಗತ್ತಿನಾದ್ಯಂತ ನೆಟ್ಟಿಗರನ್ನು ಬೆರಗುಗೊಳಿಸಿದ್ದಾನೆ. ತನ್ನ ಸರ್ಫ್‌ ಬೋರ್ಡ್‌ ಮೇಲೆ ಯಾವುದೇ ನೆರವಿಲ್ಲದೇ ನಿಂತಿರುವ ಈ ಬಾಲಕ ಬಹಳ ಲೀಲಾಜಾಲವಾಗಿ ಸಮುದ್ರದ ಅಲೆಗಳ ಭೋರ್ಗರೆತದೊಂದಿಗೆ ಸರ್ಕಸ್ ಮಾಡುತ್ತಾನೆ.

ಜೋ ವಿಟರ್‌‌ ಹೆಸರಿನ ಈ ಬಾಲಕ ಇನ್ನೂ ಅಂಬೆಗಾಲು ಇಡುತ್ತಿದ್ದಾಗಲೇ ಸರ್ಫಿಂಗ್ ಮೇಲೆ ಆಸಕ್ತಿ ಬೆಳೆಸಿಕೊಂಡು ಬಂದಿದ್ದಾನೆ. ತನ್ನ ಎರಡನೇ ವಯಸ್ಸಿನಲ್ಲೇ ಯಾವುದೇ ನೆರವಿಲ್ಲದೇ ಸರ್ಫ್‌ಬೋರ್ಡ್ ಮೇಲೆ ನಿಂತುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಜೋ. ಈತನಿಗೆ ಒಂದು ವರ್ಷ ತುಂಬುವ ಮುನ್ನವೇ ಈಜು ಕಲಿಯಲು ಹೊರಟಿದ್ದನಂತೆ! ಈ ಪುಟಾಣಿ ತನ್ನ ತಂದೆ ಹಾಗೂ ಹಿರಿಯ ಅಕ್ಕನನ್ನು ನೋಡಿಕೊಂಡು ಈಜುವುದು ಹಾಗೂ ಸರ್ಫಿಂಗ್ ಮಾಡುವುದನ್ನು ಕಲಿತಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...