alex Certify ಪುತ್ರನ ಹೊಸ ಸ್ನೇಹಿತನನ್ನ ಕಂಡು ತಾಯಿಗೆ ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಹೊಸ ಸ್ನೇಹಿತನನ್ನ ಕಂಡು ತಾಯಿಗೆ ಶಾಕ್…!

4-Year-Old Goes Out To Play, Comes Back With Baby Deer He Befriendedನಾಲ್ಕು ವರ್ಷದ ಬಾಲಕನೊಬ್ಬ ಜಿಂಕೆ ಮರಿಯನ್ನ ತನ್ನ ಬೆಸ್ಟ್ ಫ್ರೆಂಡ್​ ಮಾಡಿಕೊಂಡ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಸ್ಟೆಫನ್ನಿ ಬ್ರೌನ್ ಎಂಬಾಕೆ ತನ್ನ ಪುತ್ರ ಡೊಮಿನಿಕ್​ ಜಿಂಕೆಯ ಮರಿಯೊಂದಿಗೆ ಮನೆಯ ಬಾಗಿಲಿನ ಮುಂದೆ ಬಂದು ನಿಂತಿದ್ದನ್ನ ಕಂಡು ಶಾಕ್​ ಆಗಿದ್ದಾರೆ.

ಈ ಕುಟುಂಬ ವರ್ಜಿನಿಯಾದ ರೆಸಾರ್ಟ್​ ಒಂದಕ್ಕೆ ಪ್ರವಾಸಕ್ಕೆಂದು ತೆರಳಿತ್ತು. ಈ ಪ್ರದೇಶದಲ್ಲಿ ಬಾಲಕ ಜಿಂಕೆ ಮರಿಯೊಂದಿಗೆ ಸ್ನೇಹ ಸಂಪಾದಿಸಿದ್ದಾನೆ.

ತಾಯಿ ಫ್ರಿಡ್ಜ್​​ನ ಬಾಗಿಲನ್ನ ತೆಗೆದು ಯಾವುದೋ ವಸ್ತುವನ್ನ ತೆಗೆದುಕೊಳ್ಳಲು ಹೋಗಿದ್ದ ವೇಳೆ ಹೆಜ್ಜೆಯ ಸಪ್ಪಳ ಕೇಳಿದೆ. ಕೂಡಲೇ ಮನೆಯ ಬಾಗಿಲನ್ನ ನೋಡಿದ್ರೆ ಆಕೆಯ ಮಗ ಜಿಂಕೆ ಮರಿಯೊಂದಿಗೆ ನಿಂತಿದ್ದ. ಹಾಗೂ ಆ ಜಿಂಕೆ ಕೂಡ ಆತನೊಂದಿಗೆ ಯಾವುದೇ ಭಯವಿಲ್ಲದೇ ನಿಂತಿತ್ತು.

ಈ ದೃಶ್ಯ ನೋಡಿ ಒಂದು ಕ್ಷಣಕ್ಕೆ ಶಾಕ್​ಗೊಳಗಾದ ತಾಯಿ ಬಳಿಕ ಕೂಡಲೇ ತನ್ನ ಮೊಬೈಲ್​ನಲ್ಲಿ ಈ ಫೋಟೋ ಕ್ಲಿಕ್ಕಿಸಿದ್ದಾಳೆ. ಹಾಗೂ ಈ ಫೋಟೋವನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

 

https://www.facebook.com/stephanie.orrantia/posts/4321055511242769

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...