alex Certify ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು

ಗಂಭೀರವಾದ ಕಾಯಿಲೆಗೆ ತುತ್ತಾಗಿರುವ ನಾಲ್ಕು ವರ್ಷದ ಪೋರನ ಆಸೆಯನ್ನು ಈಡೇರಿಸಲು ಮುಂದಾದ ಅಬುಧಾಬಿ ಪೊಲೀಸರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ.

ಮೇಕ್‌-ಎ-ವಿಶ್‌ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಹಮ್ಮದ್ ಅಲ್ ಹರ್ಮೌದಿ ಹೆಸರಿನ ಈ ಬಾಲಕನ ಆಶಯವೊಂದನ್ನು ಈಡೇರಿಸಲು ಪೊಲೀಸರು ಆತನ ಮನೆಗೆ ಅಚ್ಚರಿಯ ಭೇಟಿ ಕೊಟ್ಟಿದ್ದಾರೆ.

ಪ್ರಯಾಣಿಕ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಆಟದ ಕಾರೊಂದನ್ನು ಹೊಂದುವ ಬಯಕೆ ಹೊಂದಿದ್ದ ಈ ಬಾಲಕನಿಗೆ ಪೊಲೀಸರು ಅದನ್ನು ತಂದುಕೊಟ್ಟಿದ್ದಾರೆ. ಇದರೊಂದಿಗೆ ಪೊಲೀಸ್ ಸಮವಸ್ತ್ರದಲ್ಲಿ ಒಂದು ದಿನ ಕಳೆಯುವ ಪೋರನ ಆಸೆಯನ್ನೂ ಸಹ ಪೂರೈಸಿದ ಪೊಲೀಸರು ತಮ್ಮೊಂದಿಗೆ ಪುಟ್ಟನನ್ನು ಒಂದು ದಿನ ಗಸ್ತಿನ ಕರ್ತವ್ಯಕ್ಕೆ ಕರೆದೊಯ್ದಿದ್ದರು.

ಈ ಹೃದಯಸ್ಪರ್ಶಿ ಘಟನೆಯ ವಿಡಿಯೋವನ್ನು ಅಬುಧಾಬಿ ಪೊಲೀಸರು ಫೇಸ್ಬುಕ್‌ನಲ್ಲಿರುವ ತಮ್ಮ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.facebook.com/watch/?v=2790336154541577&t=1

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...