ಸ್ಪಾಂಜ್‌ಬಾಬ್ ಅನ್ನು ನಗರ ಪ್ರದೇಶದ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಯಾವ ಮಕ್ಕಳು ತಾನೇ ಇಷ್ಟಪಡುವುದಿಲ್ಲ?
ನ್ಯೂಯಾರ್ಕ್‌ನ ನಾಲ್ಕು ವರ್ಷದ ಪೋರ ನೋವಾ ಇದಕ್ಕೆ ಹೊರತಲ್ಲ. ಈ ಕಾರ್ಟೂನ್ ಪಾತ್ರವೆಂದರೆ ನೋವಾಗೆ ಭಾರೀ ಇಷ್ಟ. ಅದರ ವೈಪರಿತ್ಯ ಯಾವ ಮಟ್ಟಿಗೆ ಹೋಗಿದೆ ಎಂದರೆ, ಅಮೇಜಾನ್‌ನಿಂದ 918 ಸ್ಪಾಂಜ್‌ಬಾಬ್‌ಗಳನ್ನು ಆರ್ಡರ್ ಮಾಡುವಷ್ಟು!
ಸ್ಪಾಂಜ್‌ಬಾಬ್ ಐಸ್ ಲಾಲಿಗಳ 52 ಕೇಸುಗಳನ್ನು ಖರೀದಿಸಿ ತಂದ ನೋವಾ ಈ ಆರ್ಡರ್ ಮೂಲಕ $2,618.85(1.91 ಲಕ್ಷ ರೂ.) ಬಿಲ್‌ನ ಹೊರೆಯನ್ನು ತನ್ನ ಹೆತ್ತವರಿಗೆ ತಂದಿಟ್ಟಿದ್ದಾನೆ. ನಡೆದ ವಿಚಾರವನ್ನು ಅಮೆಜಾನ್ ಗ್ರಾಹಕ ಸೇವಾ ಕೇಂದ್ರಕ್ಕೆ ನೋವಾನ ತಾಯಿ ವಿವರಿಸಿದರೂ ಸಹ ಆನ್ಲೈನ್ ಶಾಪಿಂಗ್ ದಿಗ್ಗಜ ಐಸ್‌ಕ್ರೀಂ ಅನ್ನು ಹಿಂದಕ್ಕೆ ಪಡೆಯಲು ಒಪ್ಪಲಿಲ್ಲ.
ಅಪ್ಪ-ಮಗಳ ನೃತ್ಯಕ್ಕೆ ಜಾಯಿನ್ ಆದ ಮದುಮಗ
ತನ್ನ ಮಗ ಮಾಡಿದ ಎಡವಟ್ಟಿಗೆ ಅಷ್ಟು ಮೊತ್ತವನ್ನು ಹೇಗಪ್ಪಾ ಕಟ್ಟೋದು ಎಂಬ ಚಿಂತೆಯಲ್ಲಿದ್ದ ಜೆನ್ನಿಫರ್ ಬ್ರಯಾಂಟ್‌ಗೆ ನ್ಯೂಯಾರ್ಕ್ ವಿವಿಯ ಅವರ ಸಹಪಾಠಿ ಕೇಟಿ ಶ್ಲಾಸ್ ಗೋಫಂಡ್‌ಮಿ ಖಾತೆಯೊಂದನ್ನು ತೆರೆದುಕೊಡುವ ಮೂಲಕ ಈ ದುಡ್ಡನ್ನು ಸಂಗ್ರಹಿಸಲು ನೆರವಾಗಿದ್ದಾರೆ.
ಗೋಫಂಡ್‌ಮೀನಲ್ಲಿ ಪೋಸ್ಟ್ ಮಾಡಿದ ಅಪ್ಡೇಟ್ ಒಂದರಲ್ಲಿ ಬರೆದ ಬ್ರಯಾಂಟ್, “ಆಟಿಸಮ್ ಸ್ಪೆಕ್ಟ್ರಮ್ ಸಮಸ್ಯೆ ಇರುವ ಮಗುವೊಂದರ ತಾಯಿಯಾಗಿರುವ ನಾನು, ಸಂಗ್ರಹವಾದ ಎಲ್ಲ ಹೆಚ್ಚುವರಿ ಹಣ ನೋವಾನ ಶಿಕ್ಷಣಕ್ಕೆ ವ್ಯಯವಾಗಲಿದೆ ಎಂದು ಹೇಳಲು ಇಚ್ಛಿಸುತ್ತೇನೆ. ನಿಮಗೆ ಎಷ್ಟು ಧನ್ಯವಾದ ಹೇಳಬೇಕೆಂಬುದೇ ತಿಳಿಯುತ್ತಿಲ್ಲ. ನಿಜಕ್ಕೂ” ಎಂದು ಪೋಸ್ಟ್ ಮಾಡಿದ್ದಾರೆ.
ವಿವಿಯ 600ರಷ್ಟು ವಿದ್ಯಾರ್ಥಿಗಳು ದೇಣಿಗೆ ನೀಡುವ ಮೂಲಕ $15,306 ಸಂಗ್ರಹಿಸಿ, ಪಾಪ್ಸಿಕಲ್‌ಗಳ ಪೂರ್ಣ ವೆಚ್ಚ ಭರಿಸಿಕೊಟ್ಟಿದ್ದಾರೆ.