ಥೇಟ್ ಸಿನೆಮಾದಲ್ಲಿ ತೋರಿದಂತೆಯೇ ಪಾರ್ಚ್‌ಮೆಂಟ್ ಪೇಪರ್ ನಲ್ಲಿ ಸಂದೇಶವೊಂದನ್ನು ಇಟ್ಟುಕೊಂಡಿದ್ದ ಬಾಟಲಿಯೊಂದು ಅಮೆರಿಕದ ಡೆಲ್ವಾರ್ ನದಿಯಲ್ಲಿ ಕಂಡುಬಂದಿದೆ.
ಈ ಬಾಟಲಿಯಲ್ಲಿದ್ದ ಸಂದೇಶವು 35 ವರ್ಷ ಹಳೆಯದಾಗಿದ್ದು, 1985ರ ಕಾಲಘಟ್ಟದ್ದು ಎನ್ನಲಾಗಿದೆ. ಆಗಸ್ಟ್ 8ರಂದು ಇಲ್ಲಿನ ಬ್ರಾಡ್‌ಕಿಲ್ ನದಿಯಲ್ಲಿ ಕಯಾಕಿಂಗ್ ಮಾಡುತ್ತಿದ್ದ ಬ್ರಾಡ್ ವಾಶ್‌ಮತ್‌ಗೆ ಈ ಬಾಟಲಿ ಸಿಕ್ಕಿದೆ. ಮೊದಲಿಗೆ ಈ ಬಾಟಲಿಯನ್ನು ತ್ಯಾಜ್ಯ ಎಂದುಕೊಂಡಿದ್ದ ಬ್ರಾಡ್, ಬಳಿಕ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಆಗಸ್ಟ್ 1, 1985ರ ದಿನಾಂಕವನ್ನು ಹೊಂದಿರುವ ಈ ಸಂದೇಶ ಪತ್ರದಲ್ಲಿ ಕೈಬರಹವಿದ್ದು, ಕ್ಯಾಥಿ ರಿಡ್ಲ್ ಎಂಬಾಕೆ ತನ್ನ ಸಹೋದರ ಸಂಬಂಧಿ ಸ್ಟೇಸಿಗೆ ಬರೆದಿದ್ದರು. ಕ್ಯಾಥಿ, ಅದೇ ಮಿಲ್ಟನ್ ಪ್ರದೇಶದಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಅವರ ವಿಳಾಸವನ್ನು ಪತ್ತೆ ಮಾಡಿದ ಬ್ರಾಡ್, ಈ ಪತ್ರವನ್ನು ಅವರಿಗೆ ತಲುಪಿಸಲು ಸಫಲರಾಗಿದ್ದಾರೆ.