ಮೆಲ್ಬರ್ನ್‌ನ ಕಲಾವಿದರೊಬ್ಬರು ತಮ್ಮ ಮನೆಯ ಒಳಗೆ 400ಕ್ಕೂ ಹೆಚ್ಚು ವಿಧದ ಸಸಿಗಳನ್ನು ನೆಡುವ ಮೂಲಕ ಸಣ್ಣದೊಂದು ’ಒಳಾಂಗಣ ಕಾಡು’ ನಿರ್ಮಿಸಿದ್ದಾರೆ.
ಜೇಸನ್ ಚೌಗೆ ಹೆಸರಿನ ಈ 32 ವರ್ಷದ ಕಲಾವಿದ ಕಳೆದ ಹಲವು ವರ್ಷಗಳಿಂದಲೂ ಅಪರೂಪದ ಬಗೆಯ ಸಸಿಗಳನ್ನು ಸಂಗ್ರಹಿಸುತ್ತಾ ಬಂದಿದ್ದಾರೆ. ಅವರ ಮನೆಯ ಪ್ರತಿ ಮೂಲೆಯಲ್ಲೂ ಸಹ ವಿವಿಧ ರೀತಿಯ ಹಾಗೂ ಗಾತ್ರದ ಸಸಿಗಳು ತುಂಬಿಕೊಂಡಿವೆ. ತನ್ನ ಪೊಷಕರು ಹಾಗೂ ಹಿರಿಯರಿಗೆ ಮನೆಯಂಗಳದಲ್ಲಿ ಗಾರ್ಡನಿಂಗ್ ಮಾಡಲು ನೆರವಾಗುತ್ತಿದ್ದ ಜೇಸನ್‌ಗೆ ಬಾಲ್ಯದಿಂದಲೂ ಈ ವಿಷಯದಲ್ಲಿ ಬಹಳ ಆಸಕ್ತಿ ಇದೆ.
ಗಾರ್ಡನರ್‌ಗಳು ಹಾಗೂ ಸಸಿ ಸಂಗ್ರಹಗಾರರಿಗೆಂದು 2016ರಲ್ಲಿ The Plant Society ಸ್ಥಾಪಿಸಿದ್ದಾರೆ ಜೇಸನ್.