ಪಾಕ್ನ ಮೃಗಾಲಯವೊಂದರಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ಸರಪಳಿ ಹಿಂದೆ ಜೀವನ ಸವೆಸಿದ ಏಕಾಂಗಿ ಆನೆ ಕಬಾನ್ ಶೀಘ್ರದಲ್ಲೇ ಕಾಂಬೋಡಿಯಾದ ತನ್ನ ಹೊಸ ಪ್ರದೇಶದಲ್ಲಿ ಸ್ವತಂತ್ರ ಜೀವನ ನಡೆಸಲಿದೆ.
ಪಾಕಿಸ್ತಾನದಲ್ಲಿರುವ ಈ ಏಷಿಯನ್ ಆನೆ ಇಸ್ಲಾಮಾಬಾದ್ ಮೃಗಾಲಯದಲ್ಲಿ ದಶಕಗಳಿಂದ ವಾಸ ಮಾಡುತ್ತಿದೆ. ಈ ಆನೆ ಮಾನಸಿಕವಾಗಿ ಕುಗ್ಗುತ್ತಿದೆ ಎಂಬ ಕಾರಣವೊಡ್ಡಿ ಅನೇಕರು ಆನೆಯನ್ನ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನ ಪುರಸ್ಕರಿಸಿದ ನ್ಯಾಯಾಲಯ ಮೇ ತಿಂಗಳಲ್ಲಿ ಕಾವನ್ನನ್ನ ಮೃಗಾಲಯದಿಂದ ಮುಕ್ತಗೊಳಿಸುವಂತೆ ಘೋಷಣೆ ಹೊರಡಿಸಿತ್ತು.
ನ್ಯಾಯಾಲಯದ ಆದೇಶದ ಬಳಿಕ ಕಾವಾನ್ನ್ನ ಕಾಂಬೋಡಿಯಾದ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಪ್ರಾಣಿ ಕಲ್ಯಾಣ ಸಂಸ್ಥೆಯಾದ ಫ್ರೀ ದಿ ವೈಲ್ಡ್ಗೆ ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ. ಕಾಂಬೋಡಿಯಾದ ಅಭಯಾರಣ್ಯಕ್ಕೆ ಕಾವನ್ ತೆರಳುವ ಮುನ್ನ ಮೃಗಾಲಯದ ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದಾರೆ.