ಲಂಡನ್ ವಿವಿಯ ಮುಂದಿನ ಬೀದಿಯಲ್ಲಿ 29 ಟನ್ ಕ್ಯಾರೆಟ್ ಗುಡ್ಡೆ ಹಾಕಿದ್ದನ್ನು ಕಂಡ ದಾರಿಹೋಕರು ಬೆಚ್ಚಿ ಬಿದ್ದಿದ್ದಾರೆ.
ಗೋಲ್ಡ್‌ಸ್ಮಿತ್ಸ್ ಪ್ರದೇಶದ ಬೆನ್ ಪಿಮ್ಲಾಟ್ ಕಟ್ಟಡದ ಬಳಿ ಬೃಹತ್ ಪ್ರಮಾಣದ ಕ್ಯಾರೆಟ್‌ಗಳನ್ನು ದೊಡ್ಡ ಟ್ರಕ್‌ಗಳು ತಂದು ಸುರಿದಿವೆ. ಇದಕ್ಕೆ ಕಾರಣವೇನೆಂದು ತಕ್ಷಣ ತಿಳಿದುಬಂದಿಲ್ಲ.
ಏಕೆ ಹೀಗೆ ಮಾಡಲಾಗಿದೆ ಎಂದು ತಿಳಿಯಲು ಹೊರಟಾಗ ವಿಚಿತ್ರ ಕಾರಣವೊಂದು ತಿಳಿದುಬಂದಿದೆ. ವಿವಿಯ ವಿದ್ಯಾರ್ಥಿ ಹಾಗೂ ಕಲಾವಿದನಾದ ರಫೇಲ್ ಪೆರೆಝ್ ಎವಾನ್ಸ್ ತಮ್ಮ ’ಗ್ರೌಂಡಿಂಗ್’ ಕೌಶಲ್ಯವನ್ನು ತೋರಲು ಹೀಗೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ತನ್ನ ಈ ಪ್ರಾಜೆಕ್ಟ್ ಮುಕ್ತಾಯವಾದ ಬಳಿಕ ಈ ಕ್ಯಾರೆಟ್ ನ್ನೆಲ್ಲಾ ಪ್ರಾಣಿಗಳಿಗೆ ತಿನಿಸುವುದಾಗಿ ಪರೆಝ್ ಹೇಳಿಕೊಂಡಿದ್ದಾರೆ.