ಎರಡು ಮರಗಳ ನಡುವೆ ಸಿಲುಕಿಕೊಂಡ ಕುದುರೆಯೊಂದನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ ಘಟನೆ ಇಂಗ್ಲೆಂಡ್‌ನ ಬಾಲ್ಲಿಂಗ್ಡನ್ ಹಿಲ್‌ನಲ್ಲಿ ಘಟಿಸಿದೆ.
ಲಭ್ಯವಿಲ್ಲದ ಕೊವ್ಯಾಕ್ಸಿನ್ ಗಾಗಿ ಮುಂದುವರೆದ ಪರದಾಟ: ಸೆಕೆಂಡ್ ಡೋಸ್ ಸಿಗ್ತಿಲ್ಲ, ಫಸ್ಟ್ ಡೋಸ್ ಸದ್ಯಕ್ಕಿಲ್ಲ…!
28 ವರ್ಷ ವಯಸ್ಸಿನ ’ಎಡ್ಡಿ’ ಹೆಸರಿನ ಈ ಕುದುರೆ ಶುಕ್ರವಾರ ಮದ್ಯಾಹ್ನದ ವೇಳೆ ಅದು ಹೇಗೋ ಹೋಗಿ ಮರಗಳ ನಡುವೆ ಸಿಕ್ಕಿ ಹಾಕಿಕೊಂಡಿದೆ. ವಿಚಾರ ತಿಳಿದ ಕೂಡಲೇ ಸ್ಪಂದಿಸಿದ ಸಫ್ಫೋಕ್ ಅಗ್ನಿಶಾಮ ಹಾಗೂ ರಕ್ಷಣಾ ಸೇವೆಯ ಸಿಬ್ಬಂದಿ ಮರದ ರೆಂಬೆಗಳನ್ನು ಕಡಿದು, ಪ್ರಾಣಿ ತಜ್ಞರೊಬ್ಬರ ನೆರವಿನಿಂದ ಕುದುರೆಯನ್ನು ರಕ್ಷಿಸಿದ್ದಾರೆ.
ಸರ್ಕಾರಿ, ಖಾಸಗಿ ನೌಕರರ ಕುಟುಂಬದವರಿಗೆ ಗುಡ್ ನ್ಯೂಸ್
ಕುದುರೆಯನ್ನು ಶಾಂತವಾಗಿರಿಸಲು ಪಶುವೈದ್ಯರು ಅದಕ್ಕೊಂದು ಅರವಳಿಕೆ ಕೊಟ್ಟ ಬಳಿಕ ಮರದ ರೆಂಬೆಗಳನ್ನು ಕಡಿಯಲಾಗಿದೆ. ಬಳಿಕ ವಿಶೇಷ ಸಲಕರಣೆಗಳನ್ನು ಬಳಸಿ ಕುದುರೆಯನ್ನು ಅಲ್ಲಿಂದ ಮೇಲೆತ್ತಲಾಗಿದೆ. ಕುದುರೆಯೀಗ ಸಹಜ ಸ್ಥಿತಿಗೆ ಮರಳಿದ್ದು ಎಂದಿನಂತೆ ಓಡಾಡಿಕೊಂಡು ಇದೆ.