alex Certify ಲೆಕ್ಚರ್‌ ಕೇಳುತ್ತಿದ್ದ ವೇಳೆ ಬಂತು ಲೈಫ್‌ ಚೇಂಜಿಂಗ್‌ ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೆಕ್ಚರ್‌ ಕೇಳುತ್ತಿದ್ದ ವೇಳೆ ಬಂತು ಲೈಫ್‌ ಚೇಂಜಿಂಗ್‌ ಸುದ್ದಿ…!

ಈ ದೊಡ್ಡ ಲಾಟರಿಗಳೇ ಹಾಗೆ ನೋಡಿ. ಏನೂ ಅಂದುಕೊಳ್ಳದೇ ಇದ್ದ ಟೈಮಿನಲ್ಲೇ ಭರ್ಜರಿ ಬಂಪರ್‌ ಹೊಡೆದುಬಿಡುತ್ತದೆ.

ಆಸ್ಟ್ರೇಲಿಯಾದ 20 ವರ್ಷದ ವಿವಿ ವಿದ್ಯಾರ್ಥಿನಿಯೊಬ್ಬಳಿಗೆ ಲೆಕ್ಚರ್‌ ಕೇಳುವ ವೇಳೆ ತನಗೆ $3.4 ದಶಲಕ್ಷ ಬಂಪರ್‌ ಬಹುಮಾನ ಬಂದಿದೆ ಎಂದು ಗೊತ್ತಾಗಿದೆ.

ಇಲ್ಲಿನ ಗ್ಲೆನೆಲ್ಗ್‌ ಪ್ರದೇಶದ, ಹೆಸರು ಹೇಳಲಿಚ್ಛಿಸದ ಈ ವಿದ್ಯಾರ್ಥಿನಿಯ ಮೊಬೈಲ್‌ಗೆ ಆಕೆಯ ಲಾಟರಿ ಗೆಲುವಿನ ಇ-ಮೇಲ್ ಬಂದಿದೆ. ಅಷ್ಟು ದೊಡ್ಡ ಬಹುಮಾನ ಗೆದ್ದ ಸುದ್ದಿ ಬಂದರೂ ಸಹ ಆಕೆ ಸಿಕ್ಕಾಪಟ್ಟೆ ಉತ್ಸಾಹದಲ್ಲಿ ಕ್ಲಾಸ್‌ರೂಂನಿಂದ ಓಡಿಹೋಗದೇ, ತರಗತಿ ಮುಕ್ತಾಯವಾಗುವವರೆಗೂ ಹಾಗೇ ಕುಳಿತಿದ್ದಾಳೆ.

‘Set For Life’ ಹೆಸರಿನ ಈ ಲಾಟರಿಯನ್ನು ಗೆದ್ದಿರುವ ಈ ವಿದ್ಯಾರ್ಥಿನಿಗೆ ಮುಂದಿನ 20 ವರ್ಷಗಳ ಮಟ್ಟಿಗೆ ಪ್ರತಿ ತಿಂಗಳು $14,300 USD ಸಂದಾಯವಾಗಲಿದೆ.

ತನ್ನ ಈ ಬಹುಮಾನದ ಮೊತ್ತದಿಂದ ತನ್ನ ಅಮ್ಮನಿಗೊಂದು ಮನೆ ಕಟ್ಟಿಸಿಕೊಟ್ಟು, ಆಸ್ಟ್ರೇಲಿಯಾ ವಿವಿಧ ಸ್ಥಳಗಳು ಹಾಗೂ ವಿದೇಶಗಳಿಗೆ ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾಗಿ ಆಕೆ ಹೇಳಿಕೊಂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...