ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಪ್ರಬಲ ಗ್ಯಾಸ್ ಸ್ಪೋಟವಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಟೆಹರಾನ್ ಉತ್ತರ ಭಾಗದ ಪಾರ್ಚಿನ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಸಿನಾ ಅತ್ತಾರ್ ಹೆಲ್ತ್ ಸೆಂಟರ್ ನಲ್ಲಿ ಸ್ಪೋಟ ಸಂಭವಿಸಿದ್ದು ಸುತ್ತಮುತ್ತಲ ಕಟ್ಟಡಗಳಿಗೆ ಹಾನಿಯಾಗಿದೆ. ಬಹು ಎತ್ತರದವರೆಗೂ ದಟ್ಟವಾದ ಹೊಗೆ ಆವರಿಸಿತ್ತು ಎಂದು ವರದಿಯಾಗಿದೆ.
ಮೊದಲಿಗೆ ಸ್ಫೋಟ ಸಂಭವಿಸಿ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣಕ್ಕೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಈ ವೇಳೆಗಾಗಲೇ 13 ಮಂದಿ ಸಾವನ್ನಪ್ಪಿದ್ದರು. ಗಾಯಗೊಂಡವರಲ್ಲಿ ಅನೇಕರು ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ.
ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಗಾಯಗೊಂಡವರನ್ನು ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ 15 ಮಹಿಳೆಯರಿದ್ದಾರೆ. ಕ್ಲಿನಿಕ್ ನ ನೆಲಮಾಳಿಗೆಯಲ್ಲಿ ಸಿಲಿಂಡರ್ ಗಳಿಗೆ ಬೆಂಕಿ ತಾಗಿ ಸ್ಫೋಟ ಸಂಭವಿಸಿದೆ. ಆಪರೇಷನ್ ಥಿಯೇಟರ್ ನಲ್ಲಿ ಇದ್ದವರು ಕೂಡ ಮೃತಪಟ್ಟಿದ್ದಾರೆ ಎಂದು ಇರಾನ್ ರಕ್ಷಣಾ ಸಚಿವಾಲಯ ಹೇಳಿದೆ.