ವಾಷಿಂಗ್ಟನ್: ಹೆಚ್1 ಬಿ ವೀಸಾ ರದ್ದು ಪ್ರಶ್ನಿಸಿ ಭಾರತೀಯ ವಲಸಿಗರು ಮೊಕದ್ದಮೆ ಹೂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಇತ್ತೀಚೆಗೆ ಹೆಚ್1 ಬಿ ವೀಸಾ ಸೇರಿದಂತೆ ವಿವಿಧ ಉದ್ಯೋಗ ಸಂಬಂಧಿತ ವೀಸಾಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಪ್ರಶ್ನಿಸಿ 174 ಭಾರತೀಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
2020 ರ ಅಂತ್ಯದವರೆಗೆ ಹೆಚ್1 ಬಿ ವೀಸಾ, ಹೆಚ್ 2 ಬಿ, ಎಲ್ ಹಾಗೂ ಜೆ ವಿಭಾಗಗಳಲ್ಲಿನ ಉದ್ಯೋಗದ ವೀಸಾಗಳನ್ನು ರದ್ದುಪಡಿಸುವುದಾಗಿ ಅಮೆರಿಕ ಅಧ್ಯಕ್ಷರು ಘೋಷಿಸಿದ್ದಾರೆ.
ಇದರಿಂದ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಕಂಪನಿಗಳಿಗೂ ಹೊಡೆತ ಬಿದ್ದಿದೆ. ಹಾಗಾಗಿ ಡೊನಾಲ್ಡ್ ಟ್ರಂಪ್ ಆಡಳಿತ ತನ್ನ ನಿರ್ಧಾರ ಬದಲಿಸಬೇಕೆಂದು ಕೊಲಂಬಿಯಾ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ.