ಟೆಕ್ಸಾಸ್ನ 17 ವರ್ಷದ ಟೀನೇಜರ್ ಒಬ್ಬಳು ಜಗತ್ತಿನಲ್ಲೇ ಅತ್ಯಂತ ಉದ್ದವಾದ ಕಾಲುಗಳನ್ನು ಹೊಂದಿರುವ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾಳೆ. ಮ್ಯಾಕಿ ಕರ್ರಿನ್ಸ್ ಹೆಸರಿನ ಈಕೆಯ ಕಾಲುಗಳು ಬಹುತೇಕ ಒಂದೂವರೆ ಮೀಟರ್ನಷ್ಟು ಉದ್ದವಿದ್ದು, ಟೀನೇಜರ್ ಒಬ್ಬಳಿಗೆ ಅತ್ಯಂತ ಉದ್ದವಾದ ಕಾಲೆಂಬ ದಾಖಲೆ ಹೊಂದಿದ್ದಾಳೆ.
ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ದಾಖಲಾಗಿರುವ ಪ್ರಕಾರ ಮ್ಯಾಕಿ ಎಡಗಾಲು 135.267 ಸೆಂಮೀ ಇದ್ದು, ಬಲಗಾಲು 134.3 ಸೆಂಮೀ ಇದೆ ಎಂದು ತಿಳಿದುಬಂದಿದೆ. ಈಕೆಯ ಎತ್ತರ 6 ಅಡಿ 10 ಇಂಚು ಇದ್ದು, ತನ್ನ ದೇಹದ ಎತ್ತರದ 60 ಪ್ರತಿಶತ ಆಕೆಯ ಕಾಲುಗಳೇ ಇವೆ ಎಂದು ಜಾಲತಾಣದ ಮೂಲಗಳು ತಿಳಿಸಿವೆ. ಈಕೆ ಈಗ ಟಿಕ್ಟಾಕ್ನಲ್ಲಿ ಜನಪ್ರಿಯಳಾಗಿದ್ದಾಳೆ.