15ನೇ ಶತಮಾನದ ಚೀನಿ ವಿಶ್ವಕೋಶವು 67 ಕೋಟಿ ರೂಪಾಯಿಗೆ ಮಾರಾಟವಾಯಿತು. ಇದರಲ್ಲಿ 22 ಸಾವಿರಕ್ಕೂ ಹೆಚ್ಚು ಅಧ್ಯಾಯ ಒಳಗೊಂಡಿದೆ. ಇದು ವಿಶ್ವದ ಅತಿ ದೊಡ್ಡ ವಿಶ್ವಕೋಶ ಎಂದು ಹೇಳಲಾಗುತ್ತಿದೆ, ಪ್ಯಾರಿಸ್ ನಲ್ಲಿ ಮಂಗಳವಾರ ಹರಾಜು ನಡೆಯಿತು.
ವಿಶ್ವಕೋಶದ ಒಂದು ವ್ಯಾಲ್ಯೂಮ್ ಚೀನಾದ ಸರೋವರದ ಬಗ್ಗೆ ತಿಳಿಸಿದರೆ, ಮತ್ತೊಂದು ಅಂತ್ಯಕ್ರಿಯೆಯ ವಿಧಿಗಳ ಬಗ್ಗೆ ತಿಳಿಸಿಕೊಡುತ್ತದೆ.
ಚೀನಾದ ಇತಿಹಾಸಕಾರ ಟಾಂಗ್ ಬಿಂಗ್ ಕ್ಯೂ ತಮ್ಮ ಟ್ವಿಟರ್ ನಲ್ಲಿ ವಿಶ್ವಕೋಶದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
1404 ಮತ್ತು 1408ರ ನಡುವೆ ಇದು ಸಿದ್ಧವಾಗಿದ್ದು, 2000 ವಿದ್ವಾಂಸರು ಇದಕ್ಕಾಗಿ ಕೆಲಸ ಮಾಡಿದ್ದಾರೆ.