ಕೊರೊನಾ ವೈರಸ್ ಹಲವು ಬದಲಾವಣೆಗಳನ್ನು ತಂದಿದೆ. ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತಿದೆ.
ಭಾರತೀಯ ಮೂಲದ ಅಮೆರಿಕ ನಿವಾಸಿ 15 ವರ್ಷದ ಬಾಲಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಪ್ ಒಂದನ್ನು ಕಂಡು ಹಿಡಿದಿದ್ದಾಳೆ. “ಗರ್ಲ್ಸ್ ವಿಥ್ ಇಂಪ್ಯಾಕ್ಟ್” ಎಂಬ ಟೈಟಲ್ ನಲ್ಲಿ ನೇಹಾ ಶುಕ್ಲಾ ಎಂಬ ಬಾಲಕಿ ತಮ್ಮ ಮನೆಯಲ್ಲೇ ಮಹಿಳೆಯರಿಗೆ ಔದ್ಯಮಿಕ ಶಿಕ್ಷಣ ನೀಡುತ್ತಿದ್ದಾಳೆ.
“ಜನ ತಮ್ಮ ನಿರ್ಲಕ್ಷ್ಯದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಲು ನಾನು ಏನಾದರೂ ಮಾಡ ಬಯಸಿದೆ. ಇಲೆಕ್ಟ್ರಾನಿಕ್ ಸೆನ್ಸರ್, ಮೈಕ್ರೊ ಪ್ರೊಸೆಸರ್, ಬಜರ್, 9 ವೋಲ್ಟ್ ಬ್ಯಾಟರಿ ಬಳಸಿ ಸಾಧನ ರಚಿಸಿದ್ದೇನೆ ಎಂದಿದ್ದಾಳೆ ಬಾಲಕಿ.
ಆಕೆ ರಚಿಸಿದ ಹ್ಯಾಟ್ ಧರಿಸಿ ಹೊರಗೆ ಹೋದರೆ, ಜನ ಪರಸ್ಪರ 6 ಅಡಿ ವ್ಯಾಪ್ತಿಯ ಒಳಗೆ ಬಂದ ತಕ್ಷಣ ಬೀಪ್ ಸಿಗ್ನಲ್ ಬರುತ್ತದೆ ಎಂದು ನೇಹಾ ಶುಕ್ಲಾ ಹೇಳಿದ್ದಾಳೆ.
https://www.facebook.com/GirlsWithImpact/posts/1042561059508778