alex Certify ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ ಚೀನಾದ ಈ ವಿಚಿತ್ರ ಸೇತುವೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ ಚೀನಾದ ಈ ವಿಚಿತ್ರ ಸೇತುವೆ..!

ಚೀನಾದ ಜೇಜಿಯಾಂಗ್​ ಪ್ರಾಂತ್ಯದಲ್ಲಿರುವ ಸೇತುವೆಯೊಂದು ತನ್ನ ವಿಚಿತ್ರ ವಿನ್ಯಾಸದ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಇದರ ವಿನ್ಯಾಸ ಎಷ್ಟು ವಿಚಿತ್ರವಾಗಿ ಇದೆ ಅಂದರೆ ಅನೇಕ ಮಂದಿ ಇಂತಹದ್ದೊಂದು ಸೇತುವೆ ಇರೋಕೆ ಸಾಧ್ಯಾನೇ ಇಲ್ಲ ಎಂದು ಹೇಳ್ತಿದ್ದಾರೆ.

ಈ ರುಯಿ ಗಾಜಿನ ಸೇತುವೆ ನೆಲದಿಂದ 140 ಮೀಟರ್​ ಎತ್ತರದಲ್ಲಿದೆ ಹಾಗೂ ಇದು ಬಾಗಿದ ಸೇತುವೆ ಎಂದೇ ಹೆಸರು ಪಡೆದಿದೆ.

ಈ ಸೇತುವೆಯನ್ನ 2017ರಲ್ಲಿ ಅನಾವರಣ ಮಾಡಲಾಗಿದ್ದು 2020ರಿಂದ ಸ್ಥಳೀಯರ ಬಳಕೆಗೆ ಅನುವು ಮಾಡಲಾಗಿದೆ. ಇದೊಂದು ಅತ್ಯುತ್ತಮ ಪ್ರವಾಸಿ ತಾಣವಾಗಿ ಬದಲಾಗೋದ್ರಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಶೆನ್ಸಿಯಾಂಜು ಸಿನಿಕ್ ಏರಿಯಾದ ವೀಬೊ ಖಾತೆಯು ನೀಡಿರುವ ಮಾಹಿತಿ ಪ್ರಕಾರ ಇದು 100 ಮೀಟರ್​ ಉದ್ದವಿದ್ದು ಭೂಮಿಯಿಂದ 140 ಮೀಟರ್​ ಎತ್ತರದಲ್ಲಿದೆ. ಇದು ಶನ್ಕ್ಸಿಯಾಂಜುವಿನ ಪೂರ್ವ ಹಾಗೂ ಪಶ್ಚಿಮದಗಲಕ್ಕೆ ವ್ಯಾಪಿಸಿದೆ.

ಈ ಸೇತುವೆಯ ಫೋಟೋಗಳ ಕೆಲ ಸಮಯದಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್​ ಆಗ್ತಿದೆ. ಈ ಸೇತುವೆ ನೋಡಿದ ಅನೇಕರು ಇಂತಹ ಸೇತುವೆ ಇರೋಕೆ ಸಾಧ್ಯವೇ ಇಲ್ಲ ಎಂದು ಹೇಳ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...