ಕೊರೊನಾ ಮಹಾಮಾರಿಯ ಸಂಕಷ್ಟ ಶುರುವಾಗಿ 10 ತಿಂಗಳುಗಳೇ ಕಳೆಯುತ್ತಾ ಬಂತು. ಕೋವಿಡ್ ತಂದೊಡ್ಡಿರುವ ಸಮಸ್ಯೆಗಳಿಂದಾಗಿ ಕಂಗಾಲಾಗಿ ಹೋಗಿರುವ ಪ್ರತಿಯೊಬ್ಬ ನಾಗರಿಕನಿಗೂ ಇರುವ ಪ್ರಶ್ನೆ ಒಂದೇ..? ಕೊರೊನಾಗೆ ಲಸಿಕೆ ಸಿಗೋದು ಯಾವಾಗ?
ಇಡೀ ವಿಶ್ವವೇ ಕೊರೊನಾಗೆ ಲಸಿಕೆ ಕಂಡು ಹಿಡಿಯೋಕೆ ಶತಪ್ರಯತ್ನ ಮಾಡ್ತಿದೆ, ಭಾರತೀಯ ಮೂಲದ ಅಮೆರಿಕದ ಯುವ ವಿಜ್ಞಾನಿ ಅನಿಕಾ ಚೆಬ್ರೊಲು ಕೊರೊನಾಗೆ ಸಂಭಾವ್ಯ ಚಿಕಿತ್ಸೆಯನ್ನ ಒದಗಿಸುವ ಆವಿಷ್ಕಾರ ಮಾಡುವ ಮೂಲಕ ಯಂಗ್ ಸೈಂಟಿಸ್ಟ್ ಚಾಲೆಂಜ್ನ್ನ ಗೆದ್ದಿದ್ದಾರೆ. ಈ ಮೂಲಕ 325000 ರೂಪಾಯಿ ಬಹುಮಾನವನ್ನ ಪಡೆದಿದ್ದಾರೆ.
ಅನಿಕಾಗೆ ಪ್ರಶಸ್ತಿ ಸಿಗಲು ಕಾರಣವಾದ ಈ ಆವಿಷ್ಕಾರವು SARS ಉಂಟುಮಾಡಬಲ್ಲ ವೈರಸ್ನ್ನ ನಾಶ ಮಾಡುವ ಇನ್ ಸಿಲಿಕಾ ವಿಧಾನ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅನಿಕಾ, ನಾನು 8ನೇ ತರಗತಿಯಲ್ಲಿದ್ದಾಗ ಈ ಆವಿಷ್ಕಾರ ಮಾಡಿದ್ದೆ. ಆಗ ಕೊರೊನಾವನ್ನ ಹೋಗಲಾಡಿಸೋದು ನನ್ನ ಉದ್ದೇಶವಾಗಿರಲ್ಲ. ಕೋವಿಡ್ ಅತ್ಯಂತ ಕಡಿಮೆ ಸಮಯದಲ್ಲಿ ಪ್ರಪಂಚದ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಹೀಗಾಗಿ ಇದರಿಂದ ಆದಷ್ಟು ಬೇಗ ಮುಕ್ತಿ ಹೊಂದಬೇಕು ಎಂದು ಆಲೋಚಿಸಿದ ನಾನು SARS-CoV-2 ವೈರಸ್ನ್ನು ಗುರಿಯಾಗಿಸಿ ಈ ಆವಿಷ್ಕಾರ ಮಾಡಿದ್ದೇನೆ ಅಂತಾ ಹೇಳಿದ್ರು
ವಿಜ್ಞಾನ ಲೋಕದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದುಕೊಂಡಿರುವ ಅನಿಕಾಗೆ ಅವರ ಅಜ್ಜನೇ ಪ್ರೇರಣೆಯಂತೆ. ಅನಿಕಾ ಅಜ್ಜ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಅವರು ನನಗೆ ವಿಜ್ಞಾನದ ಬಗೆಗಿನ ಕೌತುಕಗಳನ್ನ ಹೇಳುತ್ತಿದ್ದರು. ಹೀಗಾಗಿ ನನಗೆ ವಿಜ್ಞಾನದ ಮೇಲೆ ಆಸಕ್ತಿ ಮೂಡಿತು ಅಂತಾರೆ ಯಂಗ್ ಸೈಂಟಿಸ್ಟ್ ಅನಿಕಾ.