ಎಂಟು ಮೈಲಿ ಉದ್ದದ ಗೋಡೆಯೊಂದನ್ನು ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಮಾಡಿದ್ದು, ಇದರಲ್ಲಿ ಪ್ರಾಣಿಗಳು ಹಾಗೂ ಮಾನವರ ಚಿತ್ರಗಳನ್ನು ನೋಡಬಹುದಾಗಿದೆ.
ದಕ್ಷಿಣ ಅಮೆರಿಕಾದ ಅಮೇಜಾನ್ ಮಳೆಕಾಡಿನಲ್ಲಿ ಕಂಡು ಬಂದಿರುವ ಈ ಶಿಲೆಯ ಮೇಲಿನ ಕೆತ್ತನೆಯನ್ನು 12,500 ವರ್ಷಗಳ ಹಿಂದೆ ರಚಿಸಲಾಗಿದೆ.
ಈ ಐತಿಹಾಸಿಕ ಕಲಾಕೃತಿಯನ್ನು ಬ್ರಿಟೀಷ್-ಕೊಲಂಬಿಯನ್ ಪ್ರಾಚ್ಯವಸ್ತು ತಜ್ಞರು ಐರೋಪ್ಯ ಸಂಶೋಧನಾ ಸಮಿತಿಯ ಆರ್ಥಿಕ ನೆರವಿನ ಸಹಾಯದಿಂದ ಪತ್ತೆ ಮಾಡಿದ್ದಾರೆ. ಕೊಲಂಬಿಯಾದ ಚಿರಿಬಿಕೆ ರಾಷ್ಟ್ರೀಯ ಉದ್ಯಾನದಲ್ಲಿ ಈ ಕಲಾಕೃತಿ ಪತ್ತೆಯಾಗಿದೆ.
ಅಮೇಜಾನ್ ಮಳೆಕಾಡನ್ನು ತಲುಪಿದ ಮೊದಲ ಮಾನವರ ಕಾಲದ ಈ ಕಲಾಕೃತಿಯು ಕಳೆದುಹೋದ ನಾಗರಿಕತೆಯ ಕುರುಹುಗಳನ್ನು ಮತ್ತೆ ನೆನಪಿಗೆ ಬರುವಂತೆ ಮಾಡುತ್ತಿವೆ.
ಹಿಮಯುಗದ ಪ್ರಾಣಿಗಳಾದ ಮಾಸ್ಟಾಡಾನ್‌ಗಳೆಲ್ಲವನ್ನೂ ಈ ಕಲಾಕೃತಿಯಲ್ಲಿ ಕಾಣಬಹುದಾಗಿದೆ. ಕಳೆದ 12 ಸಾವಿರ ವರ್ಷಗಳಿಂದ ಭೂಮಿ ಮೇಲೆ ಇಲ್ಲದೇ ಇರುವ ಆನೆ ಜಾತಿಯ ಪ್ರಾಣಿಯೊಂದನ್ನು ಸಹ ಈ ಕಲಾಕೃತಿ ತೋರುತ್ತಿದೆ.