ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್ ಅಂದ್ರೆ ಪಂಚಪ್ರಾಣವಾಗಿತ್ತು. ಪಬ್‌ಜಿ ಗೇಮ್ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ ಆಟ ಬಾಲಕನ ಪ್ರಾಣ ತೆಗೆದಿದೆ.
ಬ್ರೇಕ್ ಇಲ್ಲದೆ ಒಂದೇ ಸಮನೆ ಮೊಬೈಲ್ ಗೇಮ್ ಆಡ್ತಿದ್ದನಂತೆ ಬಾಲಕ. ಪರಿಣಾಮ ಆತನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಮೂಲಗಳು ಹೇಳಿವೆ.
ಆಟ ಆಡ್ತಾ ಆಡ್ತಾ ಅಲ್ಲೇ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ ಪಾಲಕರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸಾವಿಗೆ ಕಾರಣ ಕೇಳಿದ ಪಾಲಕರು ಶಾಕ್ ಆಗಿದ್ರು. ಬಾಲಕ ಬ್ರೇಕ್ ಇಲ್ಲದೆ ಪಬ್ಜಿ ಆಟ ಆಡಿದ್ದಾನೆ. ಅದರ ನೇರ ಪರಿಣಾಮ ಹೃದಯದ ಮೇಲಾಗಿದೆ. ಇದೇ ಆತನ ಸಾವಿಗೆ ಕಾರಣವಾಗಿದೆ.
ಮಕ್ಕಳ ಗಲಾಟೆ ನಿಲ್ಲಿಸಲು ಪಾಲಕರು ಮೊಬೈಲ್ ನೀಡ್ತಾರೆ. ನಿರಂತರ ಮೊಬೈಲ್ ನೋಡುವುದ್ರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಆದರೆ ಜೀವವನ್ನೇ ತೆಗೆದ ಈ ಘಟನೆ ಪಾಲಕರಲ್ಲಿ ಭಯ ಹುಟ್ಟಿಸಿದೆ.