103 ವರ್ಷದ ಅಜ್ಜಿಯೊಬ್ಬರು ತನ್ನ 104 ನೇ ವರ್ಷದ ಹುಟ್ಟುಹಬ್ಬದೊಳಗಾಗಿ ತನಗೆ ಕೊರೊನಾ ಚುಚ್ಚುಮದ್ದು ನೀಡಬೇಕೆಂದು ಪಟ್ಟು ಹಿಡಿದು ಕೊಡಿಸಿಕೊಂಡಿದ್ದಾರೆ.
ಅಮೆರಿಕಾದ ಮೋನಾ ಜೀನ್ನೆ, ತನ್ನ ಜೀವಿತಾವಧಿಯಲ್ಲಿ 1918 ರ ಸ್ಪ್ಯಾನಿಶ್ ಇನ್ ಫ್ಲ್ಯುಯನ್ಸಾ ಸಾಂಕ್ರಾಮಿಕ ರೋಗ, 2 ವಿಶ್ವ ಸಮರಗಳಿಗೆ ಸಾಕ್ಷಿಯಾದವರು. ಇದೀಗ 103 ವರ್ಷವಾಗಿದ್ದು, 104 ನೇ ಹುಟ್ಟುಹಬ್ಬ ಎಲ್ಲರೊಂದಿಗೆ ಆಚರಿಸಿಕೊಳ್ಳಬೇಕಿರುವುದರಿಂದ ಅಷ್ಟರೊಳಗೆ ಕೊರೊನಾ ಚುಚ್ಚುಮದ್ದು ಪಡೆದರು.
ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಭಾರತೀಯ ಉಡುಗೆಯಲ್ಲಿತ್ತು ರಾಶಿ ರಾಶಿ ಡ್ರಗ್ಸ್..!
ಅಜ್ಜಿಯ ಜೀವನೋತ್ಸಾಹ ಕಂಡ ಆರೋಗ್ಯ ಸಿಬ್ಬಂದಿ, ಕೊರೊನಾ ಚುಚ್ಚುಮದ್ದು ಕೊಟ್ಟೇ ಬಿಟ್ಟರು. ಅಮೆರಿಕಾದ ಒಟ್ಟು ಜನಸಂಖ್ಯೆಯ ಶೇ.13 ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಿದ್ದು, ವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ಕೊಟ್ಟಿದೆ.