ಎರಡನೆ ಮಹಾಯುದ್ಧದ ಉತ್ತರಾರ್ಧದಲ್ಲಿ ಸಚ್ಸೆನ್ಹೌಸಸ್ ಕಾನ್ಸಂಟೇಶನ್ ಕ್ಯಾಂಪ್ನಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸಿದ್ದ 100 ವರ್ಷದ ಜರ್ಮನ್ ವ್ಯಕ್ತಿಯೊಬ್ಬರು ಬರೋಬ್ಬರಿ 3518 ಕೊಲೆಗಳಿಗೆ ಸಹಾಯ ಮಾಡಿದ್ದಾನೆ ಎಂದು ಜರ್ಮನ್ ಪ್ರಾಸಿಕ್ಯೂಟರ್ಗಳು ಸಾಬೀತು ಮಾಡಿದ್ದಾರೆ.
ಎನ್ಡಿಆರ್ ನೀಡಿರುವ ಮಾಹಿತಿಯ ಪ್ರಕಾರ, ಈಶಾನ್ಯ ರಾಜ್ಯವಾದ ಬ್ರ್ಯಾಂಡೆನ್ಬರ್ಗ್ನಲ್ಲಿ ವಾಸಿಸುತ್ತಿರುವ ಶಂಕಿತ, ಶಿಬಿರದಲ್ಲಿ ನಡೆದ ಹತ್ಯೆಗಳಿಗೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರದೇಶದಲ್ಲಿ ಅಂದಾಜು 1,00,000 ಮಂದಿ ಸಾವನ್ನಪ್ಪಿದ್ದಾರೆ.
ಕೆಲ ವರ್ಷಗಳಿಂದ ಪ್ರಾಸಿಕ್ಯೂಟರ್ಗಳು ಮಾಜಿ ಹಾಗೂ ಹಿರಿಯ ಕ್ಯಾಂಪ್ ಮೇಲ್ವಿಚಾರಕರ ವಿರುದ್ಧ ಇಂತಹ ಆರೋಪಗಳನ್ನ ಮಾಡುತ್ತಿದ್ದಾರೆ. ನಾಜಿ ಜರ್ಮನಿಯ ಯಹೂದಿಗಳು, ಜಿಪ್ಸಿಗಳು, ಸಲಿಂಗಕಾಮಿ ಹಾಗೂ ಕೈದಿಗಳು ಸೇರಿದಂತೆ ಶಿಬಿರದಲ್ಲಿ ಮೃತಪಟ್ಟ ಲಕ್ಷಾಂತರ ಮಂದಿಗೆ ನ್ಯಾಯ ಒದಗಿಸಲು ಕೊನೆ ಅಸ್ತ್ರವನ್ನ ಉಪಯೋಗಿಸಿದ್ದಾರೆ.
ಕಳೆದ ವರ್ಷ 93 ವರ್ಷದ ಬ್ರುನೋ ಡಿ ಎಂಬಾತ 5230 ಕೊಲೆಗಳಿಗೆ ಸಹಾಯ ಮಾಡಿದ ಆರೋಪದಡಿಯಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಕಳೆದ ವಾರ ಸ್ಟುಥಾಫ್ನಲ್ಲಿನ ಶಿಬಿರ ಕಾರ್ಯದರ್ಶಿಯಾಗಿದ್ದ 95 ವರ್ಷದ ಇರ್ಮ್ಗಾರ್ಡ್ ಎಫ್ ವಿರುದ್ಧ 10000 ಕೊಲೆಗೆ ಸಹಾಯ ಮಾಡಿದ ಹಿನ್ನೆಲೆ ಶಿಕ್ಷೆ ನೀಡಲಾಗಿದೆ.