ಸಂತಾನೋತ್ಪತ್ತಿಯ ವಿಕಾಸದ ಅಧ್ಯಯನಕ್ಕೆ ನೆರವಾಗಬಲ್ಲ ಸಂಶೋಧನೆಯೊಂದನ್ನು ಪಳೆಯುಳಿಕೆ ತಜ್ಞರು ಮಾಡಿದ್ದಾರೆ. ಸುಮಾರು 100 ದಶಲಕ್ಷ ವರ್ಷಗಳಷ್ಟು ಹಳೆಯ ವೀರ್ಯಾಣುಗಳನ್ನು ಮರದ ಗೋನೊಂದರ ಒಳಗೆ ಪತ್ತೆ ಮಾಡಲಾಗಿದೆ.
ಈ ಸಂಶೋಧನೆಯ ಬಗ್ಗೆ Proceedings of the Royal Society ನಿಯಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಏಡಿ ಹಾಗೂ ನಳ್ಳಿಯ ಜಾತಿಗೆ ಸೇರಿದ ಈ ಜೀವಿಯ ಹೆಸರು ಮ್ಯಾನ್ಮಾರ್‌ಸೈಪ್ರಿಸ್ ಹುಯಿ ಎಂದು.
ಆಧುನಿಕ ಯುಗದ ಮ್ಯಾನ್ಮಾರ್‌ನ ಕರಾವಳಿ ಹಾಗೂ ಒಳನಾಡಿನ ಜಲಾಗರಗಳಲ್ಲಿ ರೆಸಿನ್ ಉತ್ಪಾದಿಸುವ ಮರಗಳು ಇರುವ ಜಾಗಗಳಲ್ಲಿ ಬದುಕುತ್ತಿತ್ತು ಎಂದು ತಿಳಿದುಬಂದಿದೆ.