ತನ್ನ ಪ್ರೀತಿಯ ಅಜ್ಜಿಯನ್ನ ಕಾಣಬೇಕೆಂದು ಹತ್ತು ವರ್ಷದ ಬಾಲಕನೊಬ್ಬ ಇಟಲಿಯ ಸಿಸಿಲಿಯಿಂದ ಲಂಡನ್ ವರೆಗೂ 2,800 ಕಿಮೀಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾನೆ.
ಅಜ್ಜಿಯ ಅಪ್ಪುಗೆ ಬೇಕೆಂಬ ಒಂದೇ ಕಾರಣಕ್ಕೆ ಸಿಸಿಲಿಯ ಪಾಮೆರೋ ಪ್ರದೇಶದಿಂದ ಹೊರಟ ರೋಮಿಯೋ ಕಾಕ್ಸ್, ಜೂನ್ 20ರಂದು ತನ್ನ ತಂದೆ ಫಿಲ್ ಜೊತೆಗೆ ಪ್ರಯಾಣ ಆರಂಭಿಸಿದ್ದ. ಇಟಲಿ, ಸ್ವಿಝರ್ಲೆಂಡ್, ಫ್ರಾನ್ಸ್ ಹಾಗೂ ಬ್ರಿಟನ್ ದೇಶಗಳನ್ನು ಹಾದು ಕೊನೆಗೂ ಸೆಪ್ಟೆಂಬರ್ 21ರಂದು ರೋಮಿಯೋ ತನ್ನ ಅಜ್ಜಿಯನ್ನು ಕೂಡಿಕೊಂಡಿದ್ದಾನೆ. ಇದಕ್ಕೂ ಮೊದಲು, ಕೆಲ ದಿನಗಳ ಐಸೋಲೇಷನ್ ಅನ್ನೂ ಸಹ ಪೂರೈಸಿದ್ದಾನೆ ರೋಮಿಯೋ.
ಯೂರೋಪ್‌ನಾದ್ಯಂತ ಕೋವಿಡ್-19 ಕಾರಣದಿಂದ ಲಾಕ್‌ಡೌನ್ ಇದ್ದ ಕಾರಣದಿಂದ ಈ ಅಪ್ಪ-ಮಗ ಹೀಗೆ ಕಾಲ್ನಡಿಗೆಯಲ್ಲೇ ಅಜ್ಜಿಯ ಮನೆಗೆ ಹೋಗಿದ್ದಾರೆ. ಅಜ್ಜಿಯ ಅಪ್ಪುಗೆ ಸಿಕ್ಕ ಬಳಿಕ ಅಷ್ಟು ದೂರ ನಡೆದಿದ್ದೆಲ್ಲಾ ಸಾರ್ಥಕವಾದಂತೆ ಆಗಿದೆ ಎಂದು ರೋಮಿಯೋ ಹೇಳಿಕೊಂಡಿದ್ದಾನೆ. ಬಹಳ ದುರ್ಗಮವಾದ ನಡಿಗೆಯ ವೇಳೆ 12,000 ಪೌಂಡ್‌ಗಿಂತ ಹೆಚ್ಚಿನ ದುಡ್ಡು ಸಂಗ್ರಹಿಸಿದ ರೋಮಿಯೋ, ವಲಸಿಗರ ಶಿಕ್ಷಣಕ್ಕೆಂದು ದೇಣಿಗೆ ನೀಡಿದ್ದಾನೆ.
https://www.instagram.com/p/CE663TDnt9a/?utm_source=ig_web_copy_link