10 ವರ್ಷದ ಮಕ್ಕಳು ಶಾಪಿಂಗ್ಗೆ ಹೋಗಬೇಕು ಅಂದರೆ ತಂದೆ – ತಾಯಿಯ ಸಹಾಯ ಬೇಕೇ ಬೇಕು. ಅದರಲ್ಲೂ ಕಾರಿನಲ್ಲಿ ಹೋಗುವ ವೇಳೆಯಂತೂ ಪೋಷಕರು ಇಲ್ಲ ಅಂದರೆ ಆಗೋದೇ ಇಲ್ಲ. ಆದರೆ ಎಲ್ಲಾ ಮಕ್ಕಳು ಮುಗ್ಧರಾಗಿರ್ತಾರೆ ಅಂತಾ ಹೇಳೋಕೆ ಆಗಲ್ಲ. ಕೆಲ ಮಕ್ಕಳು ಪೋಷಕರಿಗೆ ಚಳ್ಳೆಹಣ್ಣನ್ನ ತಿನ್ನಿಸುವ ಅಭ್ಯಾಸವನ್ನ ಕರಗತ ಮಾಡಿಕೊಂಡಿರ್ತಾರೆ.
ಅಮೆರಿಕದ ಮಿನ್ನೆಸೋಟದಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದೆ. ಇಲ್ಲಿ 10 ವರ್ಷದ ಬಾಲಕಿ ತನ್ನ ತಾಯಿಯ ಕಾರನ್ನ ಸ್ವತಃ ಚಲಾಯಿಸಿಕೊಂಡು ಹೋಗಿದ್ದು ಮಾತ್ರವಲ್ಲದೇ ಸೂಪರ್ ಮಾರ್ಕೆಟ್ನಲ್ಲಿ ತಾಯಿಯ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಕೂಡ ಮಾಡಿದ್ದಾಳೆ.
ತಾಯಿಯ ಕಾರಿನಲ್ಲಿ ಬಹಳ ದೂರದವರೆಗೆ ಸಾಗಿದ ಈ ಬಾಲಕಿ ಯಾವುದೇ ಅಪಘಾತ ಮಾಡಿಕೊಳ್ಳದೇ ಇರೋದೇ ಆಶ್ಚರ್ಯಕರ ಸಂಗತಿಯಾಗಿದೆ. ತಾಯಿಯ ಮೊಬೈಲ್ಗೆ ಕ್ರೆಡಿಟ್ ಕಾರ್ಡ್ನಿಂದ ಹಣ ಖರ್ಚಾದ ಸಂದೇಶ ಬರ್ತಿದ್ದಂತೆ ಅವರು ಅಲರ್ಟ್ ಆಗಿದ್ದಾರೆ. ಮಾತ್ರವಲ್ಲದೇ ಪೊಲೀಸರಿಗೆ ಘಟನೆಯ ಬಗ್ಗೆ ವಿವರಿಸಿದ್ದಾರೆ.
ದೂರು ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ಪೊಲೀಸರು ಈವಾಳನ್ನ ಪತ್ತೆ ಹಚ್ಚಿದ್ದಾರೆ. ಸೂಪರ್ ಮಾರ್ಕೆಟ್ನಲ್ಲಿ ನೀಲಿ ಬಣ್ಣದ ಮಾಸ್ಕ್ ಹಾಕಿ ತಿರುಗಾಡ್ತಿದ್ದ ಈವಾಳನ್ನ ಪೊಲೀಸರು ರಕ್ಷಿಸಿದ್ದಾರೆ.