alex Certify ಸಾಮಾಜಿಕ ಕಾರ್ಯಕ್ಕಾಗಿ ಟೆಂಟ್ ನಲ್ಲಿ ವಾಸವಿದ್ದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಕಾರ್ಯಕ್ಕಾಗಿ ಟೆಂಟ್ ನಲ್ಲಿ ವಾಸವಿದ್ದ ಬಾಲಕ

ಯುಕೆಯ 10 ವರ್ಷದ ಬಾಲಕ 200 ದಿನಗಳ ಕಾಲ ಟೆಂಟ್​ನಲ್ಲಿ ವಾಸಿಸುವ ಮೂಲಕ ಬರೋಬ್ಬರಿ 71 ಲಕ್ಷ ರೂಪಾಯಿಯನ್ನ ದಾನದ ರೂಪದಲ್ಲಿ ಪಡೆದಿದ್ದಾನೆ. ಈ ಹಣವನ್ನ ಬಾಲಕ ಆರೋಗ್ಯ ಕೇಂದ್ರಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾನೆ.

ಮ್ಯಾಕ್ಸ್​ ವೂಸಿ ಎಂಬ ಬಾಲಕನಿಗೆ ಆತನ ಪಕ್ಕದ ಮನೆಯ ವೃದ್ಧ ರಿಕ್​ ಎಂಬ ಗೆಳೆಯನಿದ್ದ. ಇವರಿಬ್ಬರ ನಡುವೆ ಬರೋಬ್ಬರಿ 64 ವರ್ಷದ ಅಂತರವಿದ್ರೂ ಸಹ ಅದು ಅವರ ಸ್ನೇಹಕ್ಕೆ ಯಾವುದೇ ಧಕ್ಕೆ ತಂದಿರಲಿಲ್ಲ, ರಿಕ್​​ ತಾನು ಸಾಯೋದಕ್ಕೂ ಮುನ್ನ ಮ್ಯಾಕ್ಸ್​ಗೆ ಟೆಂಟ್​ ಒಂದನ್ನ ನೀಡಿದ್ದರು.

ಈ ಟೆಂಟ್​​ನ್ನ ಉಡುಗೊರೆ ರೂಪದಲ್ಲಿ ನೀಡುವ ವೇಳೆಯಲ್ಲಿ ರಿಕ್​ ಮ್ಯಾಕ್ಸ್​ ಬಳಿ ಇದರಿಂದ ಏನಾದ್ರೂ ವಿಶಿಷ್ಟವಾದ ಕೆಲಸ ಮಾಡು ಅಂತಾ ಹೇಳಿದ್ರಂತೆ. ಹೀಗಾಗಿ ತನ್ನ ಸ್ನೇಹಿತನ ಅಗಲಿಕೆಯ ನೆನಪಿಗೋಸ್ಕರ ಮ್ಯಾಕ್ಸ್ ಹಣ ಸಂಗ್ರಹ ಮಾಡಿ ಅದನ್ನ ಆರೋಗ್ಯ ಕೇಂದ್ರಕ್ಕೆ ದೇಣಿಗೆ ನೀಡಿದ್ದಾನೆ.

ಆ ಪುಟಾಣಿ ಟೆಂಟ್​ನಲ್ಲಿ 200 ರಾತ್ರಿಗಳನ್ನ ಕಳೆದ ಮ್ಯಾಕ್ಸ್ ಈ ಮೂಲಕ ಬರೋಬ್ಬರಿ 71 ಲಕ್ಷ ರೂಪಾಯಿಗಳನ್ನ ದಾನದ ರೂಪದಲ್ಲಿ ಸಂಗ್ರಹಿಸಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...