
ಹತ್ತು ಹತ್ತು ಇಪ್ಪತ್ತು ಎಂದು ಓದಲ್ಪಡುವ ಶನಿವಾರದ ದಿನಾಂಕವಾದ 10/10/2020 ಎಂದು ದಂಪತಿಗಳು ಪರಸ್ಪರ ವಿಶ್ ಮಾಡಿಕೊಳ್ಳುವುದರಿಂದ ಶುಭವಾಗಲಿದೆ ಎಂದು ಬಹಳಷ್ಟು ಕಡೆ ನಂಬಲಾಗಿದೆ.
ಈ ದಿನ ಮದುವೆ ಆದರೆ ಆ ದಾಂಪತ್ಯ ಚೆನ್ನಾಗಿರಲಿದೆ ಎಂದು ನಂಬಲಾಗಿದೆ. ಹೀಗಾಗಿ ಸಿಂಗಪುರ, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಈ ದಿನ ಬಹಳ ಜನಪ್ರಿಯವಾದದ್ದಾಗಿದೆ.
ಯಾವುದೇ ವೀಕೆಂಡ್ ದಿನಕ್ಕಿಂತ ಹತ್ತು ಪಟ್ಟು ಹೆಚ್ಚಿನ ಮದುವೆಗಳು ಶನಿವಾರ ಸಿಂಗಪುರದಲ್ಲಿ ನಡೆದಿದ್ದು, ಅವತ್ತಿನ ದಿನಾಂಕ ಬಹಳ ಸ್ಮರಣೀಯವಾಗಿಬಿಟ್ಟಿದೆ. ಅದೂ ಅಲ್ಲದೇ ಇಂದು ಭಾನುವಾರವಾದ ಕಾರಣ ಅತಿಥಿಗಳಿಗೆ ಮದುವೆಯಲ್ಲಿ ಭಾಗಿಯಾಗುವುದು ಸುಲಭವಾಗಲಿದೆ ಎಂಬ ಲೆಕ್ಕಾಚಾರವೂ ಇದರ ಹಿಂದೆ ಇದೆ. ಶನಿವಾರದಂದು ಸಿಂಗಪುರದಲ್ಲಿ 876 ಮದುವೆಗಳು ನೋಂದಣಿಯಾಗಿವೆ.