ಮಹಾಮಾರಿ ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಅನೇಕ ದೇಶಗಳಲ್ಲಿ ವಿಜ್ಞಾನಿಗಳು, ತಜ್ಞರು ಲಸಿಕೆ ಅಭಿವೃದ್ಧಿ ಪಡಿಸುವ ಅಂತಿಮ ಪ್ರಯತ್ನದಲ್ಲಿದ್ದಾರೆ.
ಅನೇಕ ಕಡೆ ಕೊರೋನಾ ಲಸಿಕೆ ಪ್ರಯೋಗ ಅಂತಿಮ ಹಂತದಲ್ಲಿದ್ದು ಒಂದು ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೆರಿಕದ ಫಾರ್ಮಾ ಕಂಪನಿ ಫಿಜರ್ ನಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಈ ಲಸಿಕೆಯ ಪರಿಣಾಮದ ಕುರಿತಂತೆ ಸೂಕ್ಷ್ಮವಾಗಿ ಗಮನ ಹರಿಸಲಾಗುತ್ತಿದೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್ 3 ರ ಮತದಾನದ ಮೊದಲು ಕೊರೋನಾ ಲಸಿಕೆಯನ್ನು ಅನುಮೋದಿಸಲಾಗುವುದು ಎಂದು ಹಲವು ಬಾರಿ ಭರವಸೆ ನೀಡಿದ್ದಾರೆ. ಸುಮಾರು ಅರ್ಧ ಡಜನ್ ಕೊರೊನಾ ಲಸಿಕೆಗಳು ಮಾನವ ಪ್ರಯೋಗದ ಮೂರನೇ ಹಂತದಲ್ಲಿ ಯಶಸ್ವಿಯಾಗಿವೆ. ಇವುಗಳಲ್ಲಿ ಫಿಜರ್ ಕೂಡ ಸೇರಿದೆ.
ಸೈನ್ಸ್ ಇನ್ ಫಾರ್ ಮ್ಯಾಟಿಕ್ಸ್ ಮತ್ತು ಅನಾಲಿಟಿಕ್ಸ್ ಕಂಪನಿ ಏರ್ಫಿನಿಟಿ ಪ್ರಕಾರ ಫಿಜರ್ ಲಸಿಕೆ ಯಶಸ್ವಿಯಾಗಿದೆ. ಈ ಲಸಿಕೆಯನ್ನು ಪಡೆದ 32 ಜನರಲ್ಲಿ 26 ಜನರ ರೋಗ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.