
ಒಂದೇ ಬಾರಿಗೆ ಮೂವರು ಸಹೋದರಿಯರು ಮಕ್ಕಳಿಗೆ ಜನ್ಮ ನೀಡುವುದು ಅತ್ಯಪರೂಪದಲ್ಲೇ ಅತ್ಯಪರೂಪ. ಓಹಿಯೋದ ಮೂವರು ಸಹೋದರಿಯರು ಇಂಥದ್ದೊಂದು ನಿದರ್ಶನಕ್ಕೆ ಕಾರಣರಾಗಿದ್ದಾರೆ.
ಇಲ್ಲಿನ ಓಹಿಯೋ ಹೆಲ್ತ್ ಮ್ಯಾನ್ಸ್‌ಫೀಲ್ಡ್ ಆಸ್ಪತ್ರೆಯಲ್ಲಿ ದನೀಶಾ ಹೇನ್ಸ್, ಏರಿಯಲ್ ವಿಲಿಯಮ್ಸ್ ಹಾಗೂ ಆಶ್ಲೇ ಹೇಯನ್ಸ್ ಎಂಬ ಸಹೋದರಿಯರು ಜುಲೈ 3ರಂದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮೂವರಿಗೂ ನಾಲ್ಕೂವರೆ ಗಂಟೆಗಳ ಅವಧಿಯ ಅಂತರದಲ್ಲಿ ಮಕ್ಕಳು ಜನಿಸಿವೆ.
ಒಂದೇ ದಿನದಲ್ಲಿ ಮೂವರು ಸಹೋದರಿಯರು ಮಕ್ಕಳಿಗೆ ಜನ್ಮ ನೀಡುವ ಪ್ರಮೇಯವು 5 ಕೋಟಿ ಹೆರಿಗೆಗಳಲ್ಲಿ ಒಮ್ಮೆ ಮಾತ್ರ ಸಾಧ್ಯ ಎನ್ನುವಷ್ಟು ಅತ್ಯಪರೂಪ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿಯಲ್ಲಿ ತಿಳಿಸಲಾಗಿದೆ. ಮೂವರೂ ಸಹೋದರಿಯರು ಸ್ವಾಭಾವಿಕವಾಗಿ ಮಕ್ಕಳಿಗೆ ಜನ್ಮ ನೀಡಿದ್ದರು.