ವ್ಯಕ್ತಿ ಅಥವಾ ಒಂದು ವಿಷ್ಯವನ್ನು ಏಕಾಏಕಿ ಪ್ರಸಿದ್ಧಿಗೆ ತರುವ ಶಕ್ತಿ ಸಾಮಾಜಿಕ ಜಾಲತಾಣ ಹಾಗೂ ಯುಟ್ಯೂಬ್ ಗಿದೆ. ಜನರು ಇಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ತಿರುತ್ತಾರೆ. ಕೆಲವರು ಪ್ರಸಿದ್ಧಿ ಪಡೆಯಲು ಅಸಾಧ್ಯವಾದ ಕೆಲಸಕ್ಕೆ ಕೈ ಹಾಕ್ತಾರೆ. ಇದಕ್ಕೆ ರಷ್ಯಾದ ಯುಟ್ಯೂಬರ್ ಮಿಖಾಯಿಲ್ ಲಿಟ್ವಿನ್ ಉತ್ತಮ ನಿದರ್ಶನ.
ಸಾಕಷ್ಟು ಫಾಲೋವರ್ಸ್ ಹೊಂದಿರುವ ಮಿಖಾಯಿಲ್, 1.10 ಕೋಟಿ ಮೌಲ್ಯದ ಕಾರಿಗೆ ಬೆಂಕಿ ಹಾಕಿದ್ದಾರೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಖಾಯಿಲ್ ಯುಟ್ಯೂಬ್ ನಲ್ಲಿ 50 ಲಕ್ಷ ಸಬ್ಸ್ಕ್ರೈಬರ್ ಹೊಂದಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ 1.16 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಮಿಖಾಯಿಲ್ ಬಳಿ ಮರ್ಸಿಡಿಸ್ ನ ಜಿಟಿ 63 ಎಸ್ ಹೆಸರಿನ ಕಾರಿತ್ತು. ಆ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಇದ್ರ ವಿಡಿಯೋ ಅಪ್ಲೋಡ್ ಮಾಡಿದ್ದು, ಜನರು ಬಗೆ ಬಗೆ ಕಮೆಂಟ್ ಮಾಡ್ತಿದ್ದಾರೆ.
ಮೈದಾನಕ್ಕೆ ಕಾರನ್ನು ತಂದು ಅದಕ್ಕೆ ಬೆಂಕಿ ಹಚ್ಚಿ, ದೂರದಲ್ಲಿ ಬಂದು ಕುಳಿತುಕೊಳ್ತಾರೆ ಮಿಖಾಯಿಲ್. ನಂತ್ರ ಮತ್ತೊಂದು ಕಾರು ಹತ್ತುತ್ತಾರೆ. ಆ ಕಾರನ್ನು ಹಿಂಬದಿಯಿಂದ ಸ್ನೇಹಿತರು ತಳ್ಳುತ್ತಾರೆ. ಈ ವಿಡಿಯೋವನ್ನು ಈವರೆಗೆ 1.14 ಕೋಟಿ ಬಾರಿ ವೀಕ್ಷಣೆ ಮಾಡಲಾಗಿದೆ. 14 ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ.