
ಸ್ಪ್ಯಾನಿಷ್ ರಾಜಧಾನಿ ಮ್ಯಾಡ್ರಿಡ್ನಲ್ಲಿ 8 ಇಂಚುಗಳಷ್ಟು ಹಿಮವನ್ನ ಕಂಡಿದ್ದು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಮ್ಯಾಡ್ರಿಡ್ನ ಹೊರತಾಗಿ ಅರಾಗೊನ್, ವೇಲ್ಸೆನಿಯಾ, ಕ್ಯಾಸ್ಟಿಲ್ಲಾ ಲಾ ಮಂಚಾ ಹಾಗೂ ಕ್ಯಾಟಲೊನಿಯಾ ಸೇರಿದಂತೆ ದೇಶದ ನಾಲ್ಕು ಪ್ರದೇಶಗಳು ಹೈ ಅಲರ್ಟ್ ಘೋಷಿಸಲಾಗಿದೆ.
ತುರ್ತು ಸಿಬ್ಬಂದಿ ನೂರಾರು ರಸ್ತೆಗಳನ್ನು ತೆರವುಗೊಳಿಸಿದ್ದಾರೆ ವಾಹನಗಳ ಅಡಿಯಲ್ಲಿ ಸಿಲುಕಿದ್ದ 1500ಕ್ಕೂ ಹೆಚ್ಚು ಮಂದಿಯನ್ನ ರಕ್ಷಿಸಲಾಗಿದೆ, ಫಿಲೋಮಿನಾ ಚಂಡಮಾರುತವು ಪೂರ್ವ ದಿಕ್ಕಿಗೆ ಸಾಗುತ್ತಿದ್ದಂತೆಯೇ ಬಲವನ್ನ ಕಳೆದುಕೊಂಡಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಜನರು ಮನೆಯಲ್ಲೇ ಇರಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೇ ಹಿಮಪಾತದ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

