ಅಮೆರಿಕನ್ ಪಾಪ್ ಗಾಯಕಿ ಲೇಡಿ ಗಾಗಾ ಬಗ್ಗೆ ನೀವು ಕೇಳಿರುತ್ತೀರಿ. ಆಕೆ ತನ್ನ ಕಣ್ಣಿನ ಮೇಕಪ್ ತೆಗೆದುಹಾಕಲು ಟೇಪ್ ಬಳಸುತ್ತಾರಂತೆ. ಮಿನುಗುವ ಈ ಮೇಕಪ್ ಅನ್ನು ತೆಗೆಯಲು ತುಸು ಕಷ್ಟ ಇರುವುದರಿಂದ ಟೇಪ್ ಬಳಸುವುದೇ ಉತ್ತಮ ಅಯ್ಕೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಕಣ್ಣಿನ ಸುತ್ತಲಿನ ಮೃದುವಾದ ತ್ವಚೆಗೆ ಹಾನಿಯಾಗದಂತೆ ಮೇಕಪ್ ತೆಗೆಯುವುದು ಬಹಳ ಮುಖ್ಯ ಎನ್ನುತ್ತಾರೆ.
ಪ್ರಸಿದ್ದ ತಾರೆ ಜೂಲಿಯಾ ರಾಬರ್ಟ್ ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಮುಗ್ಧ ನಗುವಿಗೆ ಹೆಸರುವಾಸಿಯಾದವರು. ಇವರು ತಮ್ಮ ತ್ವಚೆಯ ಆರೈಕೆಗೆ ಆಲಿವ್ ಎಣ್ಣೆಯನ್ನು ಹೆಚ್ಚು ಬಳಸುತ್ತಾರಂತೆ. ಇದರಲ್ಲಿರುವ ಕೊಬ್ಬಿನಾಮ್ಲ ಒಣಗಿದ ತ್ವಚೆಯನ್ನು ತೇವಾಂಶಭರಿತವಾಗಿಸುತ್ತದೆ ಎನ್ನುತ್ತಾರೆ.
ಅಸ್ಟ್ರೇಲಿಯಾದ ಮಾಡೆಲ್ ಮಿರಾಂಡಾ ಕೆರ್ ತನ್ನ ಕಣ್ಣುಗಳ ಸುತ್ತ ಹೈಲೈಟರ್ ಆಗಿ ಲಿಪ್ ಬಾಮ್ ಅನ್ನು ಬಳಸುತ್ತಾರಂತೆ. ತುಟಿಗೆ ಹೊಳಪು ನೀಡುವ ಇದು ರಂಧ್ರಗಳನ್ನೂ ಮುಚ್ಚಿಡುತ್ತದೆ. ಇದನ್ನು ಕಣ್ಣಿನ ಸುತ್ತ ಬಳಸುವುದರಿಂದ ನೀವು ಆಕರ್ಷಕವಾಗಿಯೂ ಕಾಣುತ್ತೀರಿ ಎನ್ನುತ್ತಾರವರು.
ಅಮೆರಿಕಾದ ನಟಿ ಡೆನಿಸೆ ರಿಚರ್ಡ್ಸ್ ಹೇರ್ ಕಂಡಿಷನರ್ ಗಾಗಿ ಅವಕಾಡೊ ಮತ್ತು ಆಲಿವ್ ಎಣ್ಣೆ ಬಳಸುತ್ತಾರಂತೆ. ಗೋರಂಟಿಯಿಂದ ತಲೆಕೂದಲಿಗೆ ಬೇರೆ ಬಣ್ಣ ಬಂದಿದ್ದನ್ನು ತೆಗೆಯಲು ಬ್ರಿಟಿಷ್ ಅಮೆರಿಕನ್ ನಟಿ ಸಿಯೆನ್ನಾ ಮಿಲ್ಲರ್ ಕೆಚಪ್ನಲ್ಲಿ ಕೂದಲು ಅದ್ದಿಡುತ್ತಾರಂತೆ. ಇದರಿಂದ ನಿಮಗಿಷ್ಟವಿಲ್ಲದ ಬಣ್ಣವನ್ನು ಸುಲಭದಲ್ಲಿ ತೆಗೆಯಬಹುದು ಎನ್ನುತ್ತಾರೆ ಅವರು.