ಕೊರೊನಾ ವೈರಸ್ ಹಾಗೂ ಸೀಲ್ ಡೌನ್ ಕೇವಲ ಶರೀರ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪ್ರಭಾವ ಬೀರುತ್ತಿಲ್ಲ. ಇದು ಶಾರೀರಿಕ ಸಂಬಂಧದ ಮೇಲೂ ಪ್ರಭಾವ ಬೀರುತ್ತಿದೆ. ಕೊರೊನಾ ನಂತ್ರ ಜನರು ಶಾರೀರಿಕ ಸಂಬಂಧ ಬೆಳೆಸಲು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಇದ್ರಿಂದ ಒತ್ತಡ ಹೆಚ್ಚಾಗ್ತಿದ್ದು, ಶಾರೀರಿಕ ಸಂಬಂಧ ಬೆಳೆಸಲು ಮನಸ್ಸಾಗ್ತಿಲ್ಲ.
ತಜ್ಞರ ಪ್ರಕಾರ, ದೈಹಿಕ ಸಂಪರ್ಕ ಬೆಳೆಸಲು ಮೊದಲಿಗಿಂತ ಆಸಕ್ತಿ ಕಡಿಮೆಯಾಗಲು ಮುಖ್ಯ ಕಾರಣ ಒತ್ತಡ. ಆತಂಕ ಮತ್ತು ಒತ್ತಡದಿಂದಾಗಿ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಹೆಚ್ಚಿನ ಪ್ರಮಾಣದ ಕಾರ್ಟಿಸೋಲ್ ಲೈಂಗಿಕ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ ಮತ್ತು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುತ್ತದೆ.
ಶಾರೀರಿಕ ಸಂಬಂಧದ ಮೇಲೆ ದಂಪತಿ ಒಟ್ಟಿಗೆ ವಾಸಿಸುವ ಸಮಯವೂ ಮಹತ್ವ ಪಡೆಯುತ್ತದೆ. ಎಷ್ಟು ಸಮಯದವರೆಗೆ ಸಂಬಂಧದಲ್ಲಿದ್ದೀರಿ ಎಂಬುದು ಪರಿಣಾಮ ಬೀರುತ್ತದೆ. ಲಾಕ್ಡೌನ್ ಕಾರಣದಿಂದಾಗಿ ವೈಯಕ್ತಿಕ, ವೃತ್ತಿಪರ ಮತ್ತು ಮಾನಸಿಕ ಒತ್ತಡದಿಂದ ದಂಪತಿ 24 ಗಂಟೆಗಳ ಕಾಲ ಒಟ್ಟಿಗೆ ವಾಸಿಸುವ ಕಾರಣ ಲೈಂಗಿಕ ಸಂಬಂಧಗಳು ಕ್ಷೀಣಿಸುತ್ತಿವೆ ಎಂದು ತಜ್ಞರು ಹೇಳುತ್ತಾರೆ.
ಲಾಕ್ ಡೌನ್ ಆರಂಭದಲ್ಲಿ ಒಟ್ಟಿಗಿದ್ದ ದಂಪತಿ ಮಧ್ಯೆ ಲೈಂಗಿಕ ಆಸಕ್ತಿ ಹೆಚ್ಚಾಗಿತ್ತಂತೆ. ಆದ್ರೆ ದಿನ ಕಳೆದಂತೆ ಆಸಕ್ತಿ ಕಡಿಮೆಯಾಗಿ ಬೇಸರ ಶುರುವಾಯ್ತೆಂದು ತಜ್ಞರು ಹೇಳಿದ್ದಾರೆ.