ವಿಶ್ವದಾದ್ಯಂತ ಸುರಕ್ಷಿತ ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಚೀನಾ, ಪ್ರಯೋಗ ಮಾಡದೆ ಕೊರೊನಾ ಲಸಿಕೆಯನ್ನು ಸಾವಿರಾರು ಮಂದಿಗೆ ನೀಡಿದೆ.
ಅಗತ್ಯ ಸೇವೆಗಳು, ಔಷಧೀಯ ಸಂಸ್ಥೆಗಳು, ಸೂಪರ್ ಮಾರುಕಟ್ಟೆ ಉದ್ಯೋಗಿಗಳು ಶಿಕ್ಷಕರು ಸೇರಿದಂತೆ ಅಪಾಯಕಾರಿ ಪ್ರದೇಶಗಳಲ್ಲಿ ಕೆಲಸ ಮಾಡುವ ಜನರಿಗೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮೂರು ಲಸಿಕೆಗಳನ್ನು ನೀಡಲಾಗಿದೆ. ನಿಗದಿತ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡುವ ಬದಲು ಸಾವಿರಾರು ಮಂದಿಗೆ ಒಂದೇ ಬಾರಿ ಲಸಿಕೆ ನೀಡಿದ್ರೆ ಪರಿಣಾಮ ಬೇಗ ಸಿಗುತ್ತದೆ ಎಂಬ ನಂಬಿಕೆ ಚೀನಾದ್ದು. ಆದ್ರೆ ಚೀನಾದ ಈ ಕೆಲಸ ವಿಶ್ವದ ವಿಜ್ಞಾನಿಗಳನ್ನು ಆಘಾತಕ್ಕೊಳಗಾಗಿಸಿದೆ.
ಚೀನಾ, ಲಸಿಕೆ ಪ್ರಯೋಗವನ್ನು ಈ ರೀತಿ ಮಾಡುವ ಮೂಲಕ ಜನರ ಜೀವದ ಜೊತೆ ಆಟವಾಡ್ತಿದೆ. ಲಸಿಕೆಯಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆಯೂ ಇದೆ. ಜೊತೆಗೆ ಲಸಿಕೆಯ ಅಡ್ಡ ಪರಿಣಾಮಗಳು ಜನರ ಮೇಲಾಗಲಿದೆ. ಕಾನೂನು ಬಾಹಿರವಾಗಿ ಸಹಿ ಹಾಕಿಸಿಕೊಂಡು ಲಸಿಕೆ ನೀಡಲಾಗಿದೆ. ಆದ್ರೆ ಎಷ್ಟು ಜನರಿಗೆ ಈ ಲಸಿಕೆ ನೀಡಲಾಗಿದೆ ಎನ್ನುವ ಬಗ್ಗೆ ಚೀನಾ ಮಾಹಿತಿ ನೀಡಿಲ್ಲ. ಸಾವಿರಾರು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿ ಸಿನೊಫಾರ್ಮ್ ಹೇಳಿದೆ.